ನಿಶ್ಚಯವಾಗಿಯೂ ತಾನು ಕಡ್ಡಾಯಗೊಳಿಸಿದ ಕಾರ್ಯಗಳನ್ನು (ದಾಸರು) ನಿರ್ವಹಿಸುವುದನ್ನು ಅಲ್ಲಾಹು ಇಷ್ಟಪಡುವಂತೆಯೇ ತಾನು ರಿಯಾಯಿತಿ ನೀಡಿದ ಕಾರ್ಯಗಳನ್ನು (ದಾಸರು) ಸ್ವೀಕರಿಸುವುದನ್ನು ಅವನು ಇಷ್ಟಪಡುತ್ತಾನೆ...

Scan the qr code to link to this page

ಹದೀಸ್
ವಿವರಣೆ
ಅನುವಾದಗಳನ್ನು ತೋರಿಸಿ
ಹದೀಸಿನ ಪ್ರಯೋಜನಗಳು
ವರ್ಗಗಳು
ಇನ್ನಷ್ಟು
ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಶ್ಚಯವಾಗಿಯೂ ತಾನು ಕಡ್ಡಾಯಗೊಳಿಸಿದ ಕಾರ್ಯಗಳನ್ನು (ದಾಸರು) ನಿರ್ವಹಿಸುವುದನ್ನು ಅಲ್ಲಾಹು ಇಷ್ಟಪಡುವಂತೆಯೇ ತಾನು ರಿಯಾಯಿತಿ ನೀಡಿದ ಕಾರ್ಯಗಳನ್ನು (ದಾಸರು) ಸ್ವೀಕರಿಸುವುದನ್ನು ಅವನು ಇಷ್ಟಪಡುತ್ತಾನೆ."
Sahih/Authentic. - Ibn Hibbaan

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ: ಧಾರ್ಮಿಕ ವಿಷಯಗಳಲ್ಲಿ ಅಲ್ಲಾಹು ನೀಡಿದ ರಿಯಾಯಿತಿಗಳನ್ನು, ಅಂದರೆ ನಿಯಮಗಳಲ್ಲಿ ಮತ್ತು ಆರಾಧನೆಗಳಲ್ಲಿರುವ ರಿಯಾಯಿತಿಗಳನ್ನು ಮತ್ತು ಪ್ರಯಾಣದ ಸಂದರ್ಭಗಳಲ್ಲಿ ನಮಾಝನ್ನು ಕುಗ್ಗಿಸುವುದು ಮತ್ತು ಜೋಡಿಸುವುದು ಮುಂತಾದ ದಾಸರಿಗೆ ನೀಡಲಾದ ಸರಳೀಕರಣಗಳನ್ನು ಅವರು ಸ್ವೀಕರಿಸುವುದನ್ನು ಅವನು ಇಷ್ಟ ಪಡುತ್ತಾನೆ. ಕಡ್ಡಾಯ ಕರ್ಮಗಳನ್ನು ದೃಢ ನಿರ್ಧಾರದಿಂದ ನಿರ್ವಹಿಸುವುದನ್ನು ಅವನು ಇಷ್ಟಪಡುವಂತೆ. ಏಕೆಂದರೆ, ರಿಯಾಯಿತಿಗಳಲ್ಲಿ ಮತ್ತು ದೃಢ ನಿರ್ಧಾರಗಳಲ್ಲಿ ಅಲ್ಲಾಹನ ಆಜ್ಞೆಯು ಒಂದೇ ಆಗಿದೆ.

ಹದೀಸಿನ ಪ್ರಯೋಜನಗಳು

  1. ಸರ್ವಶಕ್ತನಾದ ಅಲ್ಲಾಹನಿಗೆ ದಾಸರ ಮೇಲಿರುವ ದಯೆಯನ್ನು, ಮತ್ತು ಅವನು ಅವರಿಗೆ ನೀಡಿದ ರಿಯಾಯಿತಿಗಳನ್ನು ಅವರು ಸ್ವೀಕರಿಸುವುದನ್ನು ಅವನು ಇಷ್ಟಪಡುತ್ತಾನೆ ಎಂಬುದನ್ನು ಈ ಹದೀಸ್ ತಿಳಿಸುತ್ತದೆ.
  2. ಇಸ್ಲಾಮ್ ಧರ್ಮದ ಸಂಪೂರ್ಣತೆಯನ್ನು ಮತ್ತು ಅದು ಮುಸಲ್ಮಾನನಿಗೆ ಯಾವುದೇ ರೀತಿಯಲ್ಲೂ ತೊಂದರೆ ಉಂಟು ಮಾಡುವುದಿಲ್ಲ ಎಂಬುದನ್ನು ಈ ಹದೀಸ್ ವಿವರಿಸುತ್ತದೆ.

ವರ್ಗಗಳು

ಯಶಸ್ವಿಯಾಗಿ ರವಾನಿಸಲಾಗಿದೆ!