“ಎಲ್ಲವೂ ವಿಧಿ ನಿರ್ಣಯದಂತೆ ನಡೆಯುತ್ತದೆ. ನಿಶಕ್ತಿ ಮತ್ತು ಉತ್ಸಾಹ, ಅಥವಾ ಉತ್ಸಾಹ ಮತ್ತು ನಿಶಕ್ತಿ ಕೂಡ.”

Scan the qr code to link to this page

ಹದೀಸ್
ವಿವರಣೆ
ಅನುವಾದಗಳನ್ನು ತೋರಿಸಿ
ಹದೀಸಿನ ಪ್ರಯೋಜನಗಳು
ವರ್ಗಗಳು
ಇನ್ನಷ್ಟು
ತಾವೂಸ್ ರಿಂದ ವರದಿ. ಅವರು ಹೇಳಿದರು: ನಾನು ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅನೇಕ ಸಂಗಡಿಗರನ್ನು ಭೇಟಿಯಾಗಿದ್ದೇನೆ. ಎಲ್ಲವೂ ವಿಧಿ ನಿರ್ಣಯವೆಂದು ಅವರು ಹೇಳುತ್ತಿದ್ದರು. ಅವರು ಹೇಳಿದರು: ಅಬ್ದುಲ್ಲಾ ಬಿನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಎಲ್ಲವೂ ವಿಧಿ ನಿರ್ಣಯದಂತೆ ನಡೆಯುತ್ತದೆ. ನಿಶಕ್ತಿ ಮತ್ತು ಉತ್ಸಾಹ, ಅಥವಾ ಉತ್ಸಾಹ ಮತ್ತು ನಿಶಕ್ತಿ ಕೂಡ.”
Sahih/Authentic. - Muslim

ವಿವರಣೆ

ಎಲ್ಲವೂ ವಿಧಿ ನಿರ್ಣಯದಂತೆ ನಡೆಯುತ್ತದೆ ಎಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುತ್ತಾರೆ. ನಿಶಕ್ತಿಯೂ ಕೂಡ. ನಿಶಕ್ತಿಯೆಂದರೆ ಕಡ್ಡಾಯವಾಗಿರುವುದನ್ನು ಮಾಡದಿರುವುದು, ಅದನ್ನು ಮುಂದೂಡುವುದು, ಅಥವಾ ಅದರ ನಿಶ್ಚಿತ ಸಮಯದ ಬಳಿಕ ನಿರ್ವಹಿಸುವುದು. ಇಹಲೋಕ ಮತ್ತು ಪರಲೋಕಕ್ಕೆ ಸಂಬಂಧಿಸಿದ ವಿಷಯಗಳೆಲ್ಲವೂ ಇದರಲ್ಲಿ ಒಳಪಡುತ್ತವೆ. ಅದೇ ರೀತಿ ಉತ್ಸಾಹವು ಕೂಡ. ಉತ್ಸಾಹ ಎಂದರೆ ಇಹಲೋಕ ಮತ್ತು ಪರಲೋಕಕ್ಕೆ ಸಂಬಂಧಿಸಿದ ಕಾರ್ಯಗಳಲ್ಲಿ ಆವೇಶ ಮತ್ತು ಪರಿಣತಿ ಹೊಂದಿರುವುದು. ಸರ್ವಶಕ್ತನಾದ ಅಲ್ಲಾಹು ನಿಶಕ್ತಿ, ಉತ್ಸಾಹ ಮುಂತಾದ ಎಲ್ಲವನ್ನು ನಿರ್ಣಯಿಸಿದ್ದಾನೆ. ಅಲ್ಲಾಹನ ಜ್ಞಾನ ಮತ್ತು ಇಚ್ಛೆಯಲ್ಲಿರುವುದಲ್ಲದೆ ಜಗತ್ತಿನಲ್ಲಿ ಬೇರೇನೂ ಸಂಭವಿಸುವುದಿಲ್ಲ.

ಹದೀಸಿನ ಪ್ರಯೋಜನಗಳು

  1. ವಿಧಿ ನಿರ್ಣಯದ ಬಗ್ಗೆ ಸಹಾಬಿಗಳ (ಸಂಗಡಿಗರ) ವಿಶ್ವಾಸವನ್ನು ಈ ಹದೀಸ್ ವಿವರಿಸುತ್ತದೆ.
  2. ನಿಶಕ್ತಿ ಮತ್ತು ಉತ್ಸಾಹ ಸೇರಿದಂತೆ ಎಲ್ಲವೂ ಅಲ್ಲಾಹನ ವಿಧಿ ನಿರ್ಣಯದ ಪ್ರಕಾರವೇ ಸಂಭವಿಸುತ್ತವೆ.
  3. ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹದೀಸ್‌ಗಳನ್ನು ಉಲ್ಲೇಖಿಸುವುದರಲ್ಲಿ ಸಹಾಬಿಗಳಿಗೆ (ಸಂಗಡಿಗರಿಗೆ) ಇದ್ದ ದೃಢತೆ ಮತ್ತು ಸೂಕ್ಷ್ಮತೆಯನ್ನು ಈ ಹದೀಸ್ ವಿವರಿಸುತ್ತದೆ.
  4. ವಿಧಿಯಲ್ಲಿ, ಅದರ ಒಳಿತು ಮತ್ತು ಕೆಡುಕುಗಳಲ್ಲಿ ಸಂಪೂರ್ಣವಾಗಿ ವಿಶ್ವಾಸವಿಡಬೇಕೆಂದು ಈ ಹದೀಸ್ ತಿಳಿಸುತ್ತದೆ.

ವರ್ಗಗಳು

ಯಶಸ್ವಿಯಾಗಿ ರವಾನಿಸಲಾಗಿದೆ!