ನೀವು ಯಹೂದಿಗಳೊಡನೆ ಯುದ್ಧ ಮಾಡುವ ತನಕ ಮತ್ತು ಒಂದು ಬಂಡೆಯು ಅದರ ಹಿಂದೆ ಅಡಗಿರುವ ಯಹೂದಿಯನ್ನು ತೋರಿಸಿ, "ಓ ಮುಸಲ್ಮಾನನೇ! ಇಗೋ ನನ್ನ ಹಿಂದೆ ಒಬ್ಬ ಯಹೂದಿಯಿದ್ದಾನೆ. ಅವನನ್ನು ಕೊಲ್ಲು" ಎಂದು ಹೇಳುವ ತನಕ ಪ್ರಳಯವು ಸಂಭವಿಸುವುದಿಲ್ಲ...

Scan the qr code to link to this page

ಹದೀಸ್
ವಿವರಣೆ
ಅನುವಾದಗಳನ್ನು ತೋರಿಸಿ
ಹದೀಸಿನ ಪ್ರಯೋಜನಗಳು
ವರ್ಗಗಳು
ಇನ್ನಷ್ಟು
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನೀವು ಯಹೂದಿಗಳೊಡನೆ ಯುದ್ಧ ಮಾಡುವ ತನಕ ಮತ್ತು ಒಂದು ಬಂಡೆಯು ಅದರ ಹಿಂದೆ ಅಡಗಿರುವ ಯಹೂದಿಯನ್ನು ತೋರಿಸಿ, "ಓ ಮುಸಲ್ಮಾನನೇ! ಇಗೋ ನನ್ನ ಹಿಂದೆ ಒಬ್ಬ ಯಹೂದಿಯಿದ್ದಾನೆ. ಅವನನ್ನು ಕೊಲ್ಲು" ಎಂದು ಹೇಳುವ ತನಕ ಪ್ರಳಯವು ಸಂಭವಿಸುವುದಿಲ್ಲ."
Sahih/Authentic. - Al-Bukhari and Muslim

ವಿವರಣೆ

ಮುಸಲ್ಮಾನರು ಯಹೂದಿಗಳೊಡನೆ ಯುದ್ಧ ಮಾಡುವ ತನಕ ಪ್ರಳಯ ಸಂಭವಿಸುವುದಿಲ್ಲ ಎಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸಿದ್ದಾರೆ. ಎಲ್ಲಿಯವರೆಗೆಂದರೆ ಒಬ್ಬ ಯಹೂದಿ ಯುದ್ಧದಿಂದ ಪಲಾಯನ ಮಾಡಿ ಒಂದು ಬಂಡೆಯ ಹಿಂದೆ ಅಡಗಿ ಕುಳಿತರೆ, ಅಲ್ಲಾಹು ಆ ಬಂಡೆಗೆ ಮಾತನಾಡುವ ಶಕ್ತಿಯನ್ನು ನೀಡಿ ಅದು ಮುಸಲ್ಮಾನನನ್ನು ಕೂಗಿ ಕರೆದು ತನ್ನ ಹಿಂದೆ ಒಬ್ಬ ಯಹೂದಿಯಿದ್ದಾನೆ ಎಂದು ಹೇಳುವವರೆಗೆ ಮತ್ತು ಆ ಮುಸಲ್ಮಾನನು ಅವನನ್ನು ಕೊಲ್ಲುವವರೆಗೆ ಪ್ರಳಯವು ಸಂಭವಿಸುವುದಿಲ್ಲ.

ಹದೀಸಿನ ಪ್ರಯೋಜನಗಳು

  1. ಸರ್ವಶಕ್ತನಾದ ಅಲ್ಲಾಹು ತಿಳಿಸಿಕೊಟ್ಟಂತೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಭವಿಷ್ಯದಲ್ಲಿ ನಡೆಯುವ ಘಟನೆಗಳ ಬಗ್ಗೆ ತಿಳಿಸಿದ್ದಾರೆ. ಅವರು ಹೇಳಿದಂತೆಯೇ ಅವು ಸಂಭವಿಸುತ್ತವೆ ಎಂಬುದರಲ್ಲಿ ಸಂಶಯವಿಲ್ಲ.
  2. ಅಂತ್ಯಕಾಲದಲ್ಲಿ ಮುಸಲ್ಮಾನರು ಯಹೂದಿಗಳೊಡನೆ ಯುದ್ಧ ಮಾಡುತ್ತಾರೆ ಮತ್ತು ಅದು ಪ್ರಳಯದ ಚಿಹ್ನೆಗಳಲ್ಲಿ ಒಂದಾಗಿದೆ ಎಂದು ಈ ಹದೀಸ್ ತಿಳಿಸುತ್ತದೆ.
  3. ಇಸ್ಲಾಂ ಧರ್ಮವು ಪುನರುತ್ಥಾನ ದಿನದ ತನಕ ಉಳಿಯುತ್ತದೆ ಮತ್ತು ಇತರ ಎಲ್ಲ ಧರ್ಮಗಳ ಮೇಲೆ ಜಯ ಗಳಿಸುತ್ತದೆ ಎಂದು ಈ ಹದೀಸ್ ತಿಳಿಸುತ್ತದೆ.
  4. ಅಲ್ಲಾಹು ಮುಸಲ್ಮಾನರಿಗೆ ಅವರ ಶತ್ರುಗಳ ವಿರುದ್ಧ ಸಹಾಯ ಮಾಡುತ್ತಾನೆ ಎಂದು ಈ ಹದೀಸ್ ತಿಳಿಸುತ್ತದೆ. ಅಂತ್ಯಕಾಲದಲ್ಲಿ ಬಂಡೆಗಳು ಮಾತನಾಡುವುದು ಇಂತಹ ಒಂದು ಸಹಾಯವಾಗಿದೆ.

ವರ್ಗಗಳು

ಯಶಸ್ವಿಯಾಗಿ ರವಾನಿಸಲಾಗಿದೆ!