ಶೈತಾನನು ನಿಮ್ಮಲ್ಲೊಬ್ಬನ ಬಳಿಗೆ ಬಂದು ಕೇಳುತ್ತಾನೆ: "ಇದನ್ನು ಸೃಷ್ಟಿಸಿದ್ದು ಯಾರು? ಇದನ್ನು ಸೃಷ್ಟಿಸಿದ್ದು ಯಾರು?" ಹೀಗೆ ಅವನು "ನಿನ್ನ ಪರಿಪಾಲಕನನ್ನು (ಅಲ್ಲಾಹನನ್ನು) ಸೃಷ್ಟಿಸಿದ್ದು ಯಾರು?" ಎಂದು ಕೇಳುವ ತನಕ ಮುಂದುವರಿಯುತ್ತಾನೆ. ಯಾರಿಗಾದರೂ ಇಂತಹ ಅನುಭವವಾದರೆ ಅವನು ಅಲ್ಲಾಹನಲ್ಲಿ ಅ...

Scan the qr code to link to this page

ಹದೀಸ್
ವಿವರಣೆ
ಅನುವಾದಗಳನ್ನು ತೋರಿಸಿ
ಹದೀಸಿನ ಪ್ರಯೋಜನಗಳು
ವರ್ಗಗಳು
ಇನ್ನಷ್ಟು
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ಶೈತಾನನು ನಿಮ್ಮಲ್ಲೊಬ್ಬನ ಬಳಿಗೆ ಬಂದು ಕೇಳುತ್ತಾನೆ: "ಇದನ್ನು ಸೃಷ್ಟಿಸಿದ್ದು ಯಾರು? ಇದನ್ನು ಸೃಷ್ಟಿಸಿದ್ದು ಯಾರು?" ಹೀಗೆ ಅವನು "ನಿನ್ನ ಪರಿಪಾಲಕನನ್ನು (ಅಲ್ಲಾಹನನ್ನು) ಸೃಷ್ಟಿಸಿದ್ದು ಯಾರು?" ಎಂದು ಕೇಳುವ ತನಕ ಮುಂದುವರಿಯುತ್ತಾನೆ. ಯಾರಿಗಾದರೂ ಇಂತಹ ಅನುಭವವಾದರೆ ಅವನು ಅಲ್ಲಾಹನಲ್ಲಿ ಅಭಯ ಯಾಚಿಸಿ ಅಲ್ಲಿಯೇ ನಿಂತುಬಿಡಲಿ."
Sahih/Authentic. - Al-Bukhari and Muslim

ವಿವರಣೆ

ಶೈತಾನನು ಸತ್ಯವಿಶ್ವಾಸಿಯ ಮನಸ್ಸಿನಲ್ಲಿ ಪಿಸುಗುಡುವ ಇಂತಹ ಪ್ರಶ್ನೆಗಳಿಗೆ ಔಷಧಿಯನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಈ ಹದೀಸಿನಲ್ಲಿ ತಿಳಿಸುತ್ತಿದ್ದಾರೆ ಶೈತಾನನು ಕೇಳುತ್ತಾನೆ: "ಇದನ್ನು ಸೃಷ್ಟಿಸಿದ್ದು ಯಾರು? ಇದನ್ನು ಸೃಷ್ಟಿಸಿದ್ದು ಯಾರು? ಆಕಾಶವನ್ನು ಸೃಷ್ಟಿಸಿದ್ದು ಯಾರು? ಭೂಮಿಯನ್ನು ಸೃಷ್ಟಿಸಿದ್ದು ಯಾರು?" ಆಗ ಸತ್ಯವಿಶ್ವಾಸಿಯು ಧಾರ್ಮಿಕ, ನೈಸರ್ಗಿಕ, ಮತ್ತು ಬೌದ್ಧಿಕ ಆಧಾರದಲ್ಲಿ "ಅಲ್ಲಾಹು" ಎಂದು ಉತ್ತರಿಸುತ್ತಾನೆ. ಆದರೆ ಶೈತಾನನು ತನ್ನ ದುರ್ಭೋದನೆಗಳನ್ನು ಅಲ್ಲಿಗೆ ನಿಲ್ಲಿಸುವುದಿಲ್ಲ. ಬದಲಿಗೆ ಮುಂದುವರಿಯುತ್ತಾ ಕೇಳುತ್ತಾನೆ: "ಅಲ್ಲಾಹನನ್ನು ಸೃಷ್ಟಿಸಿದ್ದು ಯಾರು?" ಆಗ ಸತ್ಯವಿಶ್ವಾಸಿಯು ಮೂರು ರೀತಿಗಳಲ್ಲಿ ಈ ದುರ್ಭೋದನೆಯನ್ನು ತಡೆಗಟ್ಟಬೇಕು: ಅಲ್ಲಾಹನಲ್ಲಿರುವ ವಿಶ್ವಾಸದಿಂದ. ಅಲ್ಲಾಹನಲ್ಲಿ ಶೈತಾನನಿಂದ ಅಭಯ ಕೋರುವ ಮೂಲಕ. ದುರ್ಬೋಧನೆಯೊಂದಿಗೆ ಮುಂದುವರಿಯುವುದನ್ನು ನಿಲ್ಲುವ ಮೂಲಕ.

ಹದೀಸಿನ ಪ್ರಯೋಜನಗಳು

  1. ಶೈತಾನನ ದುರ್ಬೋಧನೆ ಮತ್ತು ದುರ್ವಿಚಾರಗಳನ್ನು ನಿರ್ಲಕ್ಷಿಸಬೇಕು, ಅವುಗಳ ಬಗ್ಗೆ ಆಲೋಚಿಸಬಾರದು ಮತ್ತು ಅವುಗಳನ್ನು ನಿವಾರಿಸಲು ಅಲ್ಲಾಹನಲ್ಲಿ ಅಭಯ ಕೋರಬೇಕು ಎಂದು ಈ ಹದೀಸ್ ತಿಳಿಸುತ್ತದೆ.
  2. ಧರ್ಮಕ್ಕೆ ವಿರುದ್ಧವಾಗಿ ಮನುಷ್ಯನ ಮನಸ್ಸಿನಲ್ಲಿ ಮೂಡುವ ದುರ್ವಿಚಾರಗಳೆಲ್ಲವೂ ಶೈತಾನನಿಂದಾಗಿವೆ ಎಂದು ಈ ಹದೀಸ್ ತಿಳಿಸುತ್ತದೆ.
  3. ಅಲ್ಲಾಹನ ಸಾರದ ಬಗ್ಗೆ ಆಲೋಚಿಸುವುದನ್ನು ಈ ಹದೀಸ್ ವಿರೋಧಿಸುತ್ತದೆ; ಅವನ ಸೃಷ್ಟಿಗಳ ಬಗ್ಗೆ ಹಾಗೂ ಅವನ ದೃಷ್ಟಾಂತಗಳ ಬಗ್ಗೆ ಆಲೋಚಿಸುವುದನ್ನು ಪ್ರೇರೇಪಿಸುತ್ತದೆ.

ವರ್ಗಗಳು

ಯಶಸ್ವಿಯಾಗಿ ರವಾನಿಸಲಾಗಿದೆ!