ಯಾರು ಒಂದು ಸ್ಥಳದಲ್ಲಿ ಇಳಿದು, 'ಅಊದು ಬಿಕಲಿಮಾತಿಲ್ಲಾಹಿ ತ್ತಾಮ್ಮಾತಿ ಮಿನ್ ಶರ್‍ರಿ ಮಾ ಖಲಕ್' (ಅರ್ಥ: ಅಲ್ಲಾಹನ ಪರಿಪೂರ್ಣ ವಚನಗಳೊಂದಿಗೆ ಅವನು ಸೃಷ್ಟಿಸಿದ ಎಲ್ಲಾ ಕೆಡುಕುಗಳಿಂದ ನಾನು ರಕ್ಷೆ ಬೇಡುತ್ತೇನೆ) ಎಂದು ಹೇಳುತ್ತಾನೋ ಅವನು ಆ ಸ್ಥಳದಿಂದ ತೆರಳುವ ತನಕ ಅವನಿಗೆ ಯಾವುದೇ ವಸ್ತು ತೊಂದ...

Scan the qr code to link to this page

ಹದೀಸ್
ವಿವರಣೆ
ಅನುವಾದಗಳನ್ನು ತೋರಿಸಿ
ಹದೀಸಿನ ಪ್ರಯೋಜನಗಳು
ವರ್ಗಗಳು
ಇನ್ನಷ್ಟು
ಖೌಲ ಬಿಂತ್ ಹಕೀಂ ಸುಲಮಿಯ್ಯ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ಯಾರು ಒಂದು ಸ್ಥಳದಲ್ಲಿ ಇಳಿದು, 'ಅಊದು ಬಿಕಲಿಮಾತಿಲ್ಲಾಹಿ ತ್ತಾಮ್ಮಾತಿ ಮಿನ್ ಶರ್‍ರಿ ಮಾ ಖಲಕ್' (ಅರ್ಥ: ಅಲ್ಲಾಹನ ಪರಿಪೂರ್ಣ ವಚನಗಳೊಂದಿಗೆ ಅವನು ಸೃಷ್ಟಿಸಿದ ಎಲ್ಲಾ ಕೆಡುಕುಗಳಿಂದ ನಾನು ರಕ್ಷೆ ಬೇಡುತ್ತೇನೆ) ಎಂದು ಹೇಳುತ್ತಾನೋ ಅವನು ಆ ಸ್ಥಳದಿಂದ ತೆರಳುವ ತನಕ ಅವನಿಗೆ ಯಾವುದೇ ವಸ್ತು ತೊಂದರೆ ಕೊಡುವುದಿಲ್ಲ."
Sahih/Authentic. - Muslim

ವಿವರಣೆ

ಒಬ್ಬ ವ್ಯಕ್ತಿ ತನ್ನ ಯಾತ್ರೆಯಲ್ಲಿ, ಅಥವಾ ಪ್ರವಾಸದಲ್ಲಿ, ಅಥವಾ ಇತರ ಯಾವುದೇ ಸಂದರ್ಭದಲ್ಲಿ ಒಂದು ಸ್ಥಳದಲ್ಲಿ ಇಳಿದು, ಆ ಸ್ಥಳದಲ್ಲಿ ಅವನು ಭಯಪಡುವ ಯಾವುದನ್ನಾದರೂ ದೂರವಿಡಲು ಬಯಸುವುದಾದರೆ ಅವನು ಸರ್ವಶಕ್ತನಾದ ಅಲ್ಲಾಹನಲ್ಲಿ ಹೇಗೆ ಆಶ್ರಯ ಬೇಡಬೇಕೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಸಮುದಾಯಕ್ಕೆ ಕಲಿಸಿಕೊಡುತ್ತಿದ್ದಾರೆ. ಅದು ಹೇಗೆಂದರೆ, ಹಾನಿ ಮಾಡುವ ಎಲ್ಲಾ ಸೃಷ್ಟಿಗಳಿಂದಲೂ ಅವನು ಶ್ರೇಷ್ಠತೆಯಲ್ಲಿ, ಸಮೃದ್ಧಿಯಲ್ಲಿ ಮತ್ತು ಪ್ರಯೋಜನದಲ್ಲಿ ಪರಿಪೂರ್ಣವಾಗಿರುವ ಮತ್ತು ಎಲ್ಲಾ ರೀತಿಯ ಕುಂದುಕೊರತೆ ಮತ್ತು ಅಪೂರ್ಣತೆಗಳಿಂದ ಮುಕ್ತವಾಗಿರುವ ಅಲ್ಲಾಹನ ವಚನಗಳೊಂದಿಗೆ ಆಶ್ರಯವನ್ನು ಬೇಡಬೇಕು. ಅವನು ಹೀಗೆ ಮಾಡಿದರೆ ಅವನು ಆ ಸ್ಥಳದಲ್ಲಿ ಎಲ್ಲಿಯವರೆಗೆ ತಂಗಿರುತ್ತಾನೋ ಅಲ್ಲಿಯವರೆಗೆ ಯಾವುದೇ ವಸ್ತು ಅವನಿಗೆ ತೊಂದರೆ ಕೊಡುವುದಿಲ್ಲ.

ಹದೀಸಿನ ಪ್ರಯೋಜನಗಳು

  1. ರಕ್ಷೆ ಬೇಡುವುದು ಆರಾಧನೆಯಾಗಿದೆ. ಅಲ್ಲಾಹನಲ್ಲಿ, ಅವನ ಹೆಸರುಗಳಲ್ಲಿ ಮತ್ತು ಅವನ ಗುಣಲಕ್ಷಣಗಳಲ್ಲಿ ರಕ್ಷೆ ಬೇಡಬಹುದು.
  2. ಅಲ್ಲಾಹನ ವಚನಗಳಲ್ಲಿ ರಕ್ಷೆ ಬೇಡಬಹುದೆಂದು ಈ ಹದೀಸ್ ತಿಳಿಸುತ್ತದೆ. ಏಕೆಂದರೆ ಅಲ್ಲಾಹನ ವಚನವು ಅವನ ಗುಣಲಕ್ಷಣಗಳಲ್ಲಿ ಒಂದಾಗಿದೆ. ಆದರೆ ಸೃಷ್ಟಿಗಳಲ್ಲಿ ರಕ್ಷೆ ಬೇಡುವುದು ಇದಕ್ಕೆ ವಿರುದ್ಧವಾಗಿದ್ದು ಅದು ಬಹುದೇವಾರಾಧನೆಯಾಗಿದೆ.
  3. ಈ ಪ್ರಾರ್ಥನೆಯ ಶ್ರೇಷ್ಠತೆಯನ್ನು ಮತ್ತು ಅದರ ಸಮೃದ್ಧಿಯನ್ನು ಈ ಹದೀಸ್ ವ್ಯಕ್ತಪಡಿಸುತ್ತದೆ.
  4. ದಿಕ್ರ್‌ಗಳನ್ನು ಪಠಿಸುವ ಮೂಲಕ ರಕ್ಷಣೆ ಪಡೆಯುವುದರಿಂದ ದಾಸನು ಕೆಡುಕುಗಳಿಂದ ಪಾರಾಗುತ್ತಾನೆ.
  5. ಜಿನ್ನ್‌ಗಳು, ಮಾಂತ್ರಿಕರು, ಮೋಸಗಾರರು ಮುಂತಾದ ಅಲ್ಲಾಹನ ಹೊರತಾದವರಲ್ಲಿ ರಕ್ಷೆ ಬೇಡುವುದು ಅಸಿಂಧುವಾಗಿಯೆಂದು ಈ ಹದೀಸ್ ತಿಳಿಸುತ್ತದೆ.
  6. ಊರಿನಲ್ಲಿ ಅಥವಾ ಪ್ರಯಾಣದಲ್ಲಿ ಯಾವುದೇ ಸ್ಥಳದಲ್ಲಿ ಇಳಿಯುವವರು ಈ ಪ್ರಾರ್ಥನೆಯನ್ನು ಪ್ರಾರ್ಥಿಸುವುದು ಅಪೇಕ್ಷಣೀಯವಾಗಿದೆ.

ವರ್ಗಗಳು

ಯಶಸ್ವಿಯಾಗಿ ರವಾನಿಸಲಾಗಿದೆ!