ನಿಶ್ಚಯವಾಗಿಯೂ ನಿಮ್ಮಲ್ಲಿ ಅತ್ಯುತ್ತಮರು ಉತ್ತಮ ನಡವಳಿಕೆಯನ್ನು ಹೊಂದಿರುವವರು

Scan the qr code to link to this page

ಹದೀಸ್
ವಿವರಣೆ
ಅನುವಾದಗಳನ್ನು ತೋರಿಸಿ
ಹದೀಸಿನ ಪ್ರಯೋಜನಗಳು
ವರ್ಗಗಳು
ಇನ್ನಷ್ಟು
ಅಬ್ದುಲ್ಲಾ ಬಿನ್ ಅಮ್ರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಶ್ಲೀಲವಾಗಿರಲಿಲ್ಲ ಮತ್ತು ಅಶ್ಲೀಲ ಭಾಷೆಯನ್ನು ಬಳಸುತ್ತಿರಲಿಲ್ಲ. ಅವರು ಹೇಳುತ್ತಿದ್ದರು: "ನಿಶ್ಚಯವಾಗಿಯೂ ನಿಮ್ಮಲ್ಲಿ ಅತ್ಯುತ್ತಮರು ಉತ್ತಮ ನಡವಳಿಕೆಯನ್ನು ಹೊಂದಿರುವವರು."
Sahih/Authentic. - Al-Bukhari and Muslim

ವಿವರಣೆ

ಅಸಭ್ಯವಾಗಿ ಮಾತನಾಡುವುದು ಅಥವಾ ಅಸಭ್ಯವಾಗಿ ವರ್ತಿಸುವುದು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಡವಳಿಕೆಯಾಗಿರಲಿಲ್ಲ. ಅವರು ಅಸಭ್ಯವನ್ನು ಬಯಸುತ್ತಿರಲಿಲ್ಲ ಮತ್ತು ಉದ್ದೇಶಪೂರ್ವಕ ಅಸಭ್ಯವಾಗಿ ವರ್ತಿಸುತ್ತಿರಲಿಲ್ಲ. ಬದಲಿಗೆ, ಅವರು ಅನುಕರಣಾಯೋಗ್ಯವಾದ ಅತ್ಯುತ್ತಮ ಚಾರಿತ್ರ್ಯವನ್ನು ಹೊಂದಿದ್ದರು. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳುತ್ತಿದ್ದರು: "ಅಲ್ಲಾಹನ ದೃಷ್ಟಿಯಲ್ಲಿ ನಿಮ್ಮಲ್ಲಿ ಅತ್ಯುತ್ತಮರು ಉತ್ತಮ ನಡವಳಿಕೆಯನ್ನು ಹೊಂದಿರುವವರು." ಉತ್ತಮ ನಡವಳಿಕೆ ಎಂದರೆ ಜನರಿಗೆ ಒಳಿತು ಮಾಡುವುದು, ಮಂದಹಾಸ ಬೀರುವುದು, ಜನರಿಗೆ ತೊಂದರೆ ಕೊಡದಿರುವುದು, ಜನರಿಂದ ಉಂಟಾಗುವ ತೊಂದರೆಗಳನ್ನು ಸಹಿಸುವುದು ಮತ್ತು ಜನರೊಡನೆ ಸುಂದರವಾಗಿ ಬೆರೆಯುವುದು.

ಹದೀಸಿನ ಪ್ರಯೋಜನಗಳು

  1. ಒಬ್ಬ ಸತ್ಯವಿಶ್ವಾಸಿ ಕೆಟ್ಟ ಮಾತು ಮತ್ತು ನೀಚಕೃತ್ಯಗಳು ಸೇರಿದಂತೆ ಎಲ್ಲಾ ಅಶ್ಲೀಲತೆಗಳಿಂದ ದೂರವಿರಬೇಕೆಂದು ಈ ಹದೀಸ್ ಒತ್ತಾಯಿಸುತ್ತದೆ.
  2. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪರಿಪೂರ್ಣ ನಡವಳಿಕೆಯನ್ನು ಹೊಂದಿದ್ದರು. ಅವರಲ್ಲಿ ಉತ್ತಮ ಕರ್ಮಗಳು ಮತ್ತು ಶುದ್ಧವಾದ ಮಾತುಗಳ ಹೊರತು ಬೇರೇನೂ ಕಂಡುಬರುತ್ತಿರಲಿಲ್ಲ.
  3. ಉತ್ತಮ ನಡವಳಿಕೆಯು ಸತ್ಯವಿಶ್ವಾಸಿಗಳು ಪರಸ್ಪರ ಸ್ಪರ್ಧಿಸಬೇಕಾದ ಕ್ಷೇತ್ರವಾಗಿದೆ. ಯಾರು ಈ ಸ್ಪರ್ಧೆಯಲ್ಲಿ ಇತರರಿಗಿಂತ ಮುಂದಿರುತ್ತಾರೋ ಅವರು ಸತ್ಯವಿಶ್ವಾಸಿಗಳಲ್ಲಿ ಅತ್ಯುತ್ತಮರು ಮತ್ತು ಪರಿಪೂರ್ಣ ವಿಶ್ವಾಸವನ್ನು ಹೊಂದಿದವರಾಗಿದ್ದಾರೆ.

ವರ್ಗಗಳು

ಯಶಸ್ವಿಯಾಗಿ ರವಾನಿಸಲಾಗಿದೆ!