ಅಲ್ಲಾಹು ಯಾರಿಗೆ ಒಳಿತನ್ನು ಬಯಸುತ್ತಾನೋ ಅವನಿಗೆ ಧಾರ್ಮಿಕ ವಿಷಯಗಳಲ್ಲಿ ಪಾಂಡಿತ್ಯವನ್ನು ನೀಡುತ್ತಾನೆ

Scan the qr code to link to this page

ಹದೀಸ್
ವಿವರಣೆ
ಅನುವಾದಗಳನ್ನು ತೋರಿಸಿ
ಹದೀಸಿನ ಪ್ರಯೋಜನಗಳು
ವರ್ಗಗಳು
ಇನ್ನಷ್ಟು
ಮುಆವಿಯ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ಅಲ್ಲಾಹು ಯಾರಿಗೆ ಒಳಿತನ್ನು ಬಯಸುತ್ತಾನೋ ಅವನಿಗೆ ಧಾರ್ಮಿಕ ವಿಷಯಗಳಲ್ಲಿ ಪಾಂಡಿತ್ಯವನ್ನು ನೀಡುತ್ತಾನೆ. ನಾನು ಕೇವಲ ಹಂಚುವವನು ಮಾತ್ರ. ಕೊಡುವವನು ಅಲ್ಲಾಹು. ಈ ಸಮುದಾಯವು ಅಲ್ಲಾಹನ ನಿಯಮಗಳನ್ನು ಅನುಸರಿಸುತ್ತಲೇ ಇರುವುದು, ಅವರನ್ನು ವಿರೋಧಿಸುವವರು ಅವರಿಗೆ ಯಾವುದೇ ತೊಂದರೆ ಮಾಡಲಾರರು, ಅಲ್ಲಾಹನ ಆಜ್ಞೆ ಜಾರಿಗೆ ಬರುವ ತನಕ."
Sahih/Authentic. - Al-Bukhari and Muslim

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸುವುದೇನೆಂದರೆ, ಅಲ್ಲಾಹು ಯಾರಿಗಾದರೂ ಒಳಿತು ಮಾಡಲು ಬಯಸಿದರೆ, ಅವನು ತನ್ನ ಧರ್ಮದ ತಿಳುವಳಿಕೆಯನ್ನು ಅವನಿಗೆ ನೀಡುತ್ತಾನೆ. ಸರ್ವಶಕ್ತನಾದ ಅಲ್ಲಾಹನು ನನಗೆ ನೀಡಿದ ಜೀವನೋಪಾಯ, ಜ್ಞಾನ ಮತ್ತು ಇತರ ವಸ್ತುಗಳನ್ನು ವಿತರಿಸುವುದನ್ನು ಮಾತ್ರ ನಾನು ಮಾಡುತ್ತಿದ್ದೇನೆ. ವಾಸ್ತವವಾಗಿ ಇವೆಲ್ಲವೂ ಅಲ್ಲಾಹನ ಕೊಡುಗೆಗಳಾಗಿವೆ. ಅಲ್ಲಾಹನ ಹೊರತಾದವರೆಲ್ಲರೂ ಕೇವಲ ಕಾರಣಗಳಾಗಿದ್ದು ಅಲ್ಲಾಹನ ಅಪ್ಪಣೆಯಿಂದಲ್ಲದೆ ಯಾವುದೇ ಉಪಕಾರ ಮಾಡಲು ಅವರಿಗೆ ಸಾಧ್ಯವಿಲ್ಲ. ಈ ಸಮುದಾಯವು ಅಲ್ಲಾಹನ ಆಜ್ಞೆಗಳಲ್ಲಿ ಸದಾ ಅಚಲವಾಗಿ ನಿಲ್ಲುತ್ತದೆ. ಅವರನ್ನು ವಿರೋಧಿಸುವವರು ಅವರಿಗೆ ಯಾವುದೇ ತೊಂದರೆ ಮಾಡಲಾರರು, ಪ್ರಳಯವು ಸಂಭವಿಸುವ ತನಕ."

ಹದೀಸಿನ ಪ್ರಯೋಜನಗಳು

  1. ಧಾರ್ಮಿಕ ಜ್ಞಾನದ ಶ್ರೇಷ್ಠತೆಯನ್ನು ಮತ್ತು ಅದನ್ನು ಕಲಿಸುವುದರ ಶ್ರೇಷ್ಠತೆಯನ್ನು ಈ ಹದೀಸ್ ತಿಳಿಸುತ್ತದೆ ಮತ್ತು ಅದಕ್ಕಾಗಿ ಪ್ರೋತ್ಸಾಹಿಸುತ್ತದೆ.
  2. ಸತ್ಯಕ್ಕೆ ಬದ್ಧರಾಗಿರುವ ಒಂದು ಗುಂಪು ಈ ಸಮುದಾಯದಲ್ಲಿ ಇದ್ದೇ ಇರುತ್ತದೆ. ಒಂದು ಗುಂಪು ಅದನ್ನು ತ್ಯಜಿಸಿದರೆ, ಇನ್ನೊಂದು ಗುಂಪು ಅದನ್ನು ಅನುಸರಿಸುತ್ತದೆ.
  3. ಧರ್ಮವನ್ನು ಅರ್ಥಮಾಡಿಕೊಳ್ಳುವುದು ಅಲ್ಲಾಹು ತನ್ನ ದಾಸರಿಗೆ ಒಳಿತನ್ನು ಉದ್ದೇಶಿಸಿದ್ದಾನೆ ಎಂಬುದರ ದ್ಯೋತಕವಾಗಿದೆ.
  4. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಲ್ಲಾಹನ ಆಜ್ಞೆ ಮತ್ತು ಇಚ್ಛೆಯ ಪ್ರಕಾರವೇ ನೀಡುತ್ತಾರೆ ಮತ್ತು ಯಾವುದು ಕೂಡ ಅವರ ಒಡೆತನದಲ್ಲಿಲ್ಲ ಎಂದು ಈ ಹದೀಸ್ ತಿಳಿಸುತ್ತದೆ.

ವರ್ಗಗಳು

ಯಶಸ್ವಿಯಾಗಿ ರವಾನಿಸಲಾಗಿದೆ!