ಜನರು ಅತಿಹೆಚ್ಚಾಗಿ ಸ್ವರ್ಗವನ್ನು ಪ್ರವೇಶಿಸಲು ಕಾರಣವಾಗುವ ವಿಷಯದ ಬಗ್ಗೆ ಕೇಳಲಾದಾಗ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಉತ್ತರಿಸಿದರು: "ಅಲ್ಲಾಹನ ಭಯ ಮತ್ತು ಉತ್ತಮ ನಡವಳಿಕೆ...

Scan the qr code to link to this page

ಹದೀಸ್
ವಿವರಣೆ
ಅನುವಾದಗಳನ್ನು ತೋರಿಸಿ
ಹದೀಸಿನ ಪ್ರಯೋಜನಗಳು
ವರ್ಗಗಳು
ಇನ್ನಷ್ಟು
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಜನರು ಅತಿಹೆಚ್ಚಾಗಿ ಸ್ವರ್ಗವನ್ನು ಪ್ರವೇಶಿಸಲು ಕಾರಣವಾಗುವ ವಿಷಯದ ಬಗ್ಗೆ ಕೇಳಲಾದಾಗ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಉತ್ತರಿಸಿದರು: "ಅಲ್ಲಾಹನ ಭಯ ಮತ್ತು ಉತ್ತಮ ನಡವಳಿಕೆ." ಜನರು ಅತಿಹೆಚ್ಚಾಗಿ ನರಕವನ್ನು ಪ್ರವೇಶಿಸಲು ಕಾರಣವಾಗುವ ವಿಷಯದ ಬಗ್ಗೆ ಕೇಳಲಾದಾಗ, ಅವರು ಹೀಗೆ ಉತ್ತರಿಸಿದರು: "ಬಾಯಿ ಮತ್ತು ಗುಹ್ಯಾಂಗ."
Hasan Sahih /Sound-Authentic. - At-Tirmidhi

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಜನರು ಅತಿಹೆಚ್ಚಾಗಿ ಸ್ವರ್ಗಕ್ಕೆ ಹೋಗಲು ಎರಡು ಕಾರಣಗಳಿವೆ. ಅವು: ಅಲ್ಲಾಹನ ಭಯ ಮತ್ತು ಉತ್ತಮ ನಡವಳಿಕೆ. ಅಲ್ಲಾಹನ ಭಯ (ತಕ್ವಾ) ಎಂದರೆ ನೀವು ನಿಮ್ಮ ಮತ್ತು ಅಲ್ಲಾಹನ ಶಿಕ್ಷೆಯ ಮಧ್ಯೆ ರಕ್ಷಣಾಕವಚವಾಗಿ ಇಡುವಂತದ್ದು. ಇದು ಅವನ ಆದೇಶಗಳನ್ನು ಪಾಲಿಸುವುದು ಮತ್ತು ಅವನು ವಿರೋಧಿಸಿದ ಕಾರ್ಯಗಳಿಂದ ದೂರವಿರುವುದಾಗಿದೆ. ಉತ್ತಮ ನಡವಳಿಕೆ ಎಂದರೆ ಮಂದಹಾಸ ಬೀರುವುದು, ಸಹಾಯ ಮಾಡುವುದು ಮತ್ತು ತೊಂದರೆಗಳನ್ನು ತಡೆಗಟ್ಟುವುದು. ಜನರು ಅತಿಹೆಚ್ಚಾಗಿ ನರಕಕ್ಕೆ ಹೋಗಲು ಕೂಡ ಎರಡು ಕಾರಣಗಳಿವೆ. ಅವು: ನಾಲಿಗೆ ಮತ್ತು ಗುಹ್ಯಾಂಗ. ಸುಳ್ಳು ಹೇಳುವುದು, ಪರದೂಷಣೆ ಮಾಡುವುದು, ಚಾಡಿ ಹೇಳುವುದು ಮುಂತಾದವುಗಳು ನಾಲಿಗೆಯಿಂದ ಸಂಭವಿಸುವ ಪಾಪಗಳಾಗಿವೆ. ವ್ಯಭಿಚಾರ, ಸಲಿಂಗರತಿ ಮುಂತಾದವುಗಳು ಗುಹ್ಯಾಂಗದಿಂದ ಸಂಭವಿಸುವ ಪಾಪಗಳಾಗಿವೆ.

ಹದೀಸಿನ ಪ್ರಯೋಜನಗಳು

  1. ಸ್ವರ್ಗ ಪ್ರವೇಶ ಸಿಗಬೇಕಾದರೆ ಅಲ್ಲಾಹನನ್ನು ಭಯಪಡುವುದು ಮುಂತಾದ ಅಲ್ಲಾಹನೊಂದಿಗೆ ಸಂಬಂಧವಿರುವ ಮತ್ತು ಉತ್ತಮ ನಡವಳಿಕೆಯಂತಹ ಜನರೊಂದಿಗೆ ಸಂಬಂಧವಿರುವ ಕೆಲವು ಕಾರಣಗಳಿವೆಯೆಂದು ಈ ಹದೀಸ್ ತಿಳಿಸುತ್ತದೆ.
  2. ನಾಲಿಗೆಯು ಮನುಷ್ಯನಿಗೆ ತಂದೊಡ್ಡುವ ಅಪಾಯಗಳ ಬಗ್ಗೆ ಮತ್ತು ಅದು ನರಕ ಪ್ರವೇಶಕ್ಕೆ ಕಾರಣವಾಗುತ್ತದೆಯೆಂದು ಈ ಹದೀಸ್ ತಿಳಿಸುತ್ತದೆ.
  3. ಮೋಹ ಮತ್ತು ಅಶ್ಲೀಲತೆಗಳು ಮನುಷ್ಯನಿಗೆ ತಂದೊಡ್ಡುವ ಅಪಾಯಗಳ ಬಗ್ಗೆ ಮತ್ತು ಅದು ಜನರು ಅತಿಹೆಚ್ಚಾಗಿ ನರಕ ಪ್ರವೇಶಿಸಲು ಕಾರಣವಾಗುತ್ತದೆಯೆಂದು ಈ ಹದೀಸ್ ತಿಳಿಸುತ್ತದೆ.

ವರ್ಗಗಳು

ಯಶಸ್ವಿಯಾಗಿ ರವಾನಿಸಲಾಗಿದೆ!