ನಾಲ್ಕು ವಚನಗಳು ಅಲ್ಲಾಹನಿಗೆ ಅತ್ಯಂತ ಇಷ್ಟವಾಗಿವೆ: ಸು‌ಬ್‌ಹಾನಲ್ಲಾಹ್, ಅಲ್-ಹಮ್ದುಲಿಲ್ಲಾಹ್, ಲಾಇಲಾಹ ಇಲ್ಲಲ್ಲಾಹ್ ಮತ್ತು ಅಲ್ಲಾಹು ಅಕ್ಬರ್. ನೀನು ಯಾವುದರಿಂದ ಪ್ರಾರಂಭಿಸಿದರೂ ತೊಂದರೆಯಿಲ್ಲ...

Scan the qr code to link to this page

ಹದೀಸ್
ವಿವರಣೆ
ಅನುವಾದಗಳನ್ನು ತೋರಿಸಿ
ಹದೀಸಿನ ಪ್ರಯೋಜನಗಳು
ವರ್ಗಗಳು
ಇನ್ನಷ್ಟು
ಸಮುರ ಬಿನ್ ಜುಂದುಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಾಲ್ಕು ವಚನಗಳು ಅಲ್ಲಾಹನಿಗೆ ಅತ್ಯಂತ ಇಷ್ಟವಾಗಿವೆ: ಸು‌ಬ್‌ಹಾನಲ್ಲಾಹ್, ಅಲ್-ಹಮ್ದುಲಿಲ್ಲಾಹ್, ಲಾಇಲಾಹ ಇಲ್ಲಲ್ಲಾಹ್ ಮತ್ತು ಅಲ್ಲಾಹು ಅಕ್ಬರ್. ನೀನು ಯಾವುದರಿಂದ ಪ್ರಾರಂಭಿಸಿದರೂ ತೊಂದರೆಯಿಲ್ಲ."
Sahih/Authentic. - Muslim

ವಿವರಣೆ

ನಾಲ್ಕು ವಚನಗಳು ಅಲ್ಲಾಹನಿಗೆ ಅತ್ಯಂತ ಇಷ್ಟವಾಗಿವೆಯೆಂದು ಪ್ರವಾದಿಯವರು ಇಲ್ಲಿ ವಿವರಿಸುತ್ತಿದ್ದಾರೆ. ಅವು: ಸು‌ಬ್‌ಹಾನಲ್ಲಾಹ್: ಎಂದರೆ ಅಲ್ಲಾಹನನ್ನು ಎಲ್ಲಾ ರೀತಿಯ ನ್ಯೂನತೆ ಅಥವಾ ಕೊರತೆಗಳಿಂದ ಪರಿಶುದ್ಧಗೊಳಿಸುವುದು. ಅಲ್-ಹಮ್ದುಲಿಲ್ಲಾಹ್: ಇದು ಅಲ್ಲಾಹನನ್ನು ಪ್ರೀತಿಸುವುದು ಮತ್ತು ಅತಿಯಾಗಿ ಗೌರವಿಸುವುದರ ಜೊತೆಗೆ ಅವನನ್ನು ಸಂಪೂರ್ಣತೆಯ ಗುಣಗಳಿಂದ ವರ್ಣಿಸುವುದಾಗಿದೆ. ಲಾ ಇಲಾಹ ಇಲ್ಲಲ್ಲಾಹ್: ಅಂದರೆ ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ. ಅಲ್ಲಾಹು ಅಕ್ಬರ್: ಅಂದರೆ ಅಲ್ಲಾಹು ಎಲ್ಲಾ ವಸ್ತುಗಳಿಗಿಂತಲೂ ಪರಮೋಚ್ಛನು, ಮಹಾಮಹಿಮನು ಮತ್ತು ಪ್ರತಾಪವುಳ್ಳವನು. ಇವುಗಳ ಶ್ರೇಷ್ಠತೆ ಮತ್ತು ಇವುಗಳಿಗೆ ದೊರಕುವ ಪ್ರತಿಫಲವನ್ನು ಪಡೆಯಬೇಕಾದರೆ ಇವುಗಳನ್ನು ಅನುಕ್ರಮವಾಗಿಯೇ ಹೇಳಬೇಕೆಂಬ ನಿಬಂಧನೆಯಿಲ್ಲ.

ಹದೀಸಿನ ಪ್ರಯೋಜನಗಳು

  1. ಇಸ್ಲಾಂ ಧರ್ಮವು ಸುಲಭವಾಗಿದೆಯೆಂದು ಈ ಹದೀಸ್ ತಿಳಿಸುತ್ತದೆ. ಏಕೆಂದರೆ ಈ ವಚನಗಳಲ್ಲಿ ಯಾವುದನ್ನು ಮೊದಲು ಹೇಳಿದರೂ ಅದರಲ್ಲಿ ತೊಂದರೆಯಿಲ್ಲವೆಂದು ಹೇಳಲಾಗಿದೆ.

ವರ್ಗಗಳು

ಯಶಸ್ವಿಯಾಗಿ ರವಾನಿಸಲಾಗಿದೆ!