ಒಬ್ಬ ದಾಸ ಪಾಪವನ್ನು ಮಾಡಿ ನಂತರ ಹೇಳುತ್ತಾನೆ: "ಓ ಅಲ್ಲಾಹ್! ನನ್ನ ಪಾಪವನ್ನು ಕ್ಷಮಿಸು

Scan the qr code to link to this page

ಹದೀಸ್
ವಿವರಣೆ
ಅನುವಾದಗಳನ್ನು ತೋರಿಸಿ
ಹದೀಸಿನ ಪ್ರಯೋಜನಗಳು
ವರ್ಗಗಳು
ಇನ್ನಷ್ಟು
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸರ್ವಶಕ್ತನಾದ ಅವರ ಪರಿಪಾಲಕನಿಂದ (ಅಲ್ಲಾಹನಿಂದ) ವರದಿ ಮಾಡುತ್ತಾ ಹೇಳುತ್ತಾರೆ: "ಒಬ್ಬ ದಾಸ ಪಾಪವನ್ನು ಮಾಡಿ ನಂತರ ಹೇಳುತ್ತಾನೆ: "ಓ ಅಲ್ಲಾಹ್! ನನ್ನ ಪಾಪವನ್ನು ಕ್ಷಮಿಸು." ಆಗ ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ನನ್ನ ದಾಸ ಪಾಪ ಮಾಡಿದ್ದಾನೆ ಮತ್ತು ಪಾಪಗಳನ್ನು ಕ್ಷಮಿಸುವ ಹಾಗೂ ಪಾಪಗಳಿಗೆ ಶಿಕ್ಷೆ ನೀಡುವ ಒಬ್ಬ ಪರಿಪಾಲಕನಿದ್ದಾನೆ ಎಂದು ಅವನು ತಿಳಿದಿದ್ದಾನೆ." ನಂತರ, ಆ ದಾಸ ಮತ್ತೆ ಪಾಪ ಮಾಡಿ, ನಂತರ ಹೇಳುತ್ತಾನೆ: "ಓ ನನ್ನ ಪರಿಪಾಲಕನೇ! ನನ್ನ ಪಾಪವನ್ನು ಕ್ಷಮಿಸು." ಆಗ ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ನನ್ನ ದಾಸ ಪಾಪ ಮಾಡಿದ್ದಾನೆ ಮತ್ತು ಪಾಪಗಳನ್ನು ಕ್ಷಮಿಸುವ ಹಾಗೂ ಪಾಪಗಳಿಗೆ ಶಿಕ್ಷೆ ನೀಡುವ ಒಬ್ಬ ಪರಿಪಾಲಕನಿದ್ದಾನೆ ಎಂದು ಅವನು ತಿಳಿದಿದ್ದಾನೆ." ನಂತರ, ಆ ದಾಸ ಮತ್ತೆ ಪಾಪ ಮಾಡಿ, ನಂತರ ಹೇಳುತ್ತಾನೆ: "ಓ ನನ್ನ ಪರಿಪಾಲಕನೇ! ನನ್ನ ಪಾಪವನ್ನು ಕ್ಷಮಿಸು." ಆಗ ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ನನ್ನ ದಾಸ ಪಾಪ ಮಾಡಿದ್ದಾನೆ ಮತ್ತು ಪಾಪಗಳನ್ನು ಕ್ಷಮಿಸುವ ಹಾಗೂ ಪಾಪಗಳಿಗೆ ಶಿಕ್ಷೆ ನೀಡುವ ಒಬ್ಬ ಪರಿಪಾಲಕನಿದ್ದಾನೆ ಎಂದು ಅವನು ತಿಳಿದಿದ್ದಾನೆ. ನಿನಗೆ ಇಷ್ಟವಿರುವುದನ್ನು ಮಾಡು. ನಾನಂತೂ ನಿನ್ನನ್ನು ಕ್ಷಮಿಸಿದ್ದೇನೆ."
Sahih/Authentic. - Al-Bukhari and Muslim

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರ ಪರಿಪಾಲಕನಿಂದ (ಅಲ್ಲಾಹನಿಂದ) ವರದಿ ಮಾಡುತ್ತಾ ಹೇಳುವುದೇನೆಂದರೆ, ಒಬ್ಬ ದಾಸ ಪಾಪ ಮಾಡಿದ ನಂತರ, "ಓ ಅಲ್ಲಾಹ್! ನನ್ನನ್ನು ಕ್ಷಮಿಸು" ಎಂದು ಹೇಳುತ್ತಾನೆ. ಆಗ ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ನನ್ನ ದಾಸ ಪಾಪ ಮಾಡಿದ್ದಾನೆ. ಆದರೆ ಪಾಪವನ್ನು ಕ್ಷಮಿಸುವ, ಮರೆಮಾಚುವ, ಮಾಫಿ ಮಾಡುವ ಮತ್ತು ಪಾಪ ಮಾಡಿದ್ದಕ್ಕಾಗಿ ಶಿಕ್ಷಿಸುವ ಒಬ್ಬ ಪರಿಪಾಲಕ ಅವನಿಗಿದ್ದಾನೆ ಎಂದು ಅವನು ತಿಳಿದಿದ್ದಾನೆ. ಆದ್ದರಿಂದ ನಾನು ಅವನನ್ನು ಕ್ಷಮಿಸಿದ್ದೇನೆ." ನಂತರ, ಆ ದಾಸ ಮತ್ತೆ ಪಾಪವನ್ನು ಮಾಡಿ ಪ್ರಾರ್ಥಿಸುತ್ತಾನೆ: "ಓ ಅಲ್ಲಾಹ್! ನನ್ನ ಪಾಪವನ್ನು ಕ್ಷಮಿಸು." ಆಗ ಅಲ್ಲಾಹು ಹೇಳುತ್ತಾನೆ: "ನನ್ನ ದಾಸ ಪಾಪ ಮಾಡಿದ್ದಾನೆ. ಆದರೆ ಪಾಪವನ್ನು ಕ್ಷಮಿಸುವ, ಮರೆಮಾಚುವ, ಮಾಫಿ ಮಾಡುವ ಮತ್ತು ಪಾಪ ಮಾಡಿದ್ದಕ್ಕಾಗಿ ಶಿಕ್ಷಿಸುವ ಒಬ್ಬ ಪರಿಪಾಲಕ ಅವನಿಗಿದ್ದಾನೆ ಎಂದು ಅವನು ತಿಳಿದಿದ್ದಾನೆ. ಆದ್ದರಿಂದ ನಾನು ನನ್ನ ದಾಸನಿಗೆ ಕ್ಷಮಿಸಿದ್ದೇನೆ." ನಂತರ, ಆ ದಾಸ ಮತ್ತೆ ಪಾಪವನ್ನು ಮಾಡಿ ಪ್ರಾರ್ಥಿಸುತ್ತಾನೆ: "ಓ ಅಲ್ಲಾಹ್! ನನ್ನ ಪಾಪವನ್ನು ಕ್ಷಮಿಸು." ಆಗ ಅಲ್ಲಾಹು ಹೇಳುತ್ತಾನೆ: "ನನ್ನ ದಾಸ ಪಾಪ ಮಾಡಿದ್ದಾನೆ. ಆದರೆ ಪಾಪವನ್ನು ಕ್ಷಮಿಸುವ, ಮರೆಮಾಚುವ, ಮಾಫಿ ಮಾಡುವ ಮತ್ತು ಪಾಪ ಮಾಡಿದ್ದಕ್ಕಾಗಿ ಶಿಕ್ಷಿಸುವ ಒಬ್ಬ ಪರಿಪಾಲಕ ಅವನಿಗಿದ್ದಾನೆ ಎಂದು ಅವನು ತಿಳಿದಿದ್ದಾನೆ. ಆದ್ದರಿಂದ ನಾನು ನನ್ನ ದಾಸನಿಗೆ ಕ್ಷಮಿಸಿದ್ದೇನೆ." ಅವನಿಗೆ ಇಷ್ಟವಿರುವುದನ್ನು ಅವನು ಮಾಡಲಿ. ಅವನು ಪ್ರತಿ ಬಾರಿ ಪಾಪ ಮಾಡಿದಾಗಲೂ, ಆ ಪಾಪವನ್ನು ತೊರೆದು, ಪಶ್ಚಾತ್ತಾಪಪಟ್ಟು, ಮತ್ತೆ ಆ ಪಾಪವನ್ನು ಮಾಡುವುದಿಲ್ಲವೆಂದು ನಿರ್ಧರಿಸುತ್ತಾನೆ. ಆದರೆ ಅವನ ಮನಸ್ಸು ಅವನನ್ನು ಸೋಲಿಸುತ್ತದೆ ಅವನು ಮತ್ತೆ ಮತ್ತೆ ಪಾಪ ಮಾಡುತ್ತಾನೆ. ಅವನು ಹೀಗೆ ಪಾಪ ಮಾಡಿದ ನಂತರ ಪಶ್ಚಾತ್ತಾಪಪಡುತ್ತಿರುವ ತನಕ ನಾನು ಅವನಿಗೆ ಕ್ಷಮಿಸುತ್ತಲೇ ಇರುತ್ತೇನೆ. ಪಶ್ಚಾತ್ತಾಪವು ಅದಕ್ಕಿಂತ ಮುಂಚೆ ಮಾಡಿದ ಪಾಪಗಳನ್ನು ನಿರ್ಮೂಲನ ಮಾಡುತ್ತದೆ.

ಹದೀಸಿನ ಪ್ರಯೋಜನಗಳು

  1. ಅಲ್ಲಾಹನಿಗೆ ತನ್ನ ದಾಸರ ಮೇಲಿರುವ ಕರುಣೆಯನ್ನು ಮತ್ತು ಮನುಷ್ಯನು ಪಾಪ ಮಾಡಿ ಪಶ್ಚಾತ್ತಾಪಪಡುತ್ತಿರುವ ತನಕ ಅಲ್ಲಾಹು ಅವನಿಗೆ ಕ್ಷಮಿಸುತ್ತಾನೆಂದು ಈ ಹದೀಸ್ ತಿಳಿಸುತ್ತದೆ.
  2. ಸರ್ವಶಕ್ತನಾದ ಅಲ್ಲಾಹನಲ್ಲಿ ವಿಶ್ವಾಸವಿರುವ ದಾಸನು ಅಲ್ಲಾಹನ ಕ್ಷಮೆಯಲ್ಲಿ ನಿರೀಕ್ಷೆಯಿಡುತ್ತಾನೆ ಮತ್ತು ಅವನ ಶಿಕ್ಷೆಯನ್ನು ಭಯಪಡುತ್ತಾನೆ. ಆದ್ದರಿಂದ ಅವನು ತಕ್ಷಣ ಪಶ್ಚಾತ್ತಾಪ ಪಡುತ್ತಾನೆ ಮತ್ತು ಆ ಪಾಪವನ್ನು ಮುಂದುವರಿಸುವುದಿಲ್ಲ.
  3. ಸ್ವೀಕಾರಯೋಗ್ಯ ಪಶ್ಚಾತ್ತಾಪದ ಷರತ್ತುಗಳು: ಪಾಪವನ್ನು ತ್ಯಜಿಸುವುದು, ಅದರ ಬಗ್ಗೆ ವಿಷಾದ ವ್ಯಕ್ತಪಡಿಸುವುದು ಮತ್ತು ಅದನ್ನು ಮತ್ತೆ ಮಾಡದಿರಲು ದೃಢನಿರ್ಧಾರ ತಾಳುವುದು. ಆದರೆ, ಇತರರ ಆಸ್ತಿ, ಮಾನ ಅಥವಾ ಪ್ರಾಣಕ್ಕೆ ಸಂಬಂಧಿಸಿದ ಪಾಪಕ್ಕೆ ಪಶ್ಚಾತ್ತಾಪ ಪಡುವುದಾದರೆ, ನಾಲ್ಕನೇ ಹೆಚ್ಚುವರಿ ಷರತ್ತು ಇದೆ. ಅದು: ಅನ್ಯಾಯಕ್ಕೊಳಗಾದ ವ್ಯಕ್ತಿಯೊಡನೆ ಕ್ಷಮೆ ಕೇಳುವುದು ಅಥವಾ ಅವನ ಹಕ್ಕನ್ನು ಅವನಿಗೆ ಹಿಂದಿರುಗಿಸುವುದು.
  4. ಅಲ್ಲಾಹನ ಕುರಿತಾದ ಜ್ಞಾನದ ಪ್ರಾಮುಖ್ಯತೆಯನ್ನು ಈ ಹದೀಸ್ ತಿಳಿಸುತ್ತದೆ. ಏಕೆಂದರೆ ಆ ಜ್ಞಾನವು ವ್ಯಕ್ತಿಗೆ ಧಾರ್ಮಿಕ ವಿಷಯಗಳ ಬಗ್ಗೆ ಅರಿವು ಮೂಡಿಸುತ್ತದೆ. ಆದ್ದರಿಂದ ಅವನು ಪ್ರತಿ ಬಾರಿ ಪಾಪ ಮಾಡಿದಾಗಲೂ ಪಶ್ಚಾತ್ತಾಪ ಪಡುತ್ತಾನೆ. ಅವನು ಹತಾಶನಾಗುವುದಿಲ್ಲ ಅಥವಾ ಪಾಪಗಳಲ್ಲಿ ಮುಂದುವರಿಯುವುದಿಲ್ಲ.

ವರ್ಗಗಳು

ಯಶಸ್ವಿಯಾಗಿ ರವಾನಿಸಲಾಗಿದೆ!