ನೀವು ಅಲ್ಲಾಹನಲ್ಲಿ ಭರವಸೆಯಿಡಬೇಕಾದ ರೀತಿಯಲ್ಲೇ ಭರವಸೆಯಿಟ್ಟರೆ, ಅವನು ಹಕ್ಕಿಗಳಿಗೆ ಆಹಾರ ನೀಡುವಂತೆ ನಿಮಗೂ ಆಹಾರ ನೀಡುವನು. ಅವು ಬೆಳಗ್ಗೆ ಖಾಲಿ ಹೊಟ್ಟೆಯಿಂದ ಹೊರಟು ಸಂಜೆ ತುಂಬಿದ ಹೊಟ್ಟೆಯೊಂದಿಗೆ ಮರಳುತ್ತವೆ...

Scan the qr code to link to this page

ಹದೀಸ್
ವಿವರಣೆ
ಅನುವಾದಗಳನ್ನು ತೋರಿಸಿ
ಹದೀಸಿನ ಪ್ರಯೋಜನಗಳು
ವರ್ಗಗಳು
ಇನ್ನಷ್ಟು
ಉಮರ್ ಬಿನ್ ಖತ್ತಾಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ನೀವು ಅಲ್ಲಾಹನಲ್ಲಿ ಭರವಸೆಯಿಡಬೇಕಾದ ರೀತಿಯಲ್ಲೇ ಭರವಸೆಯಿಟ್ಟರೆ, ಅವನು ಹಕ್ಕಿಗಳಿಗೆ ಆಹಾರ ನೀಡುವಂತೆ ನಿಮಗೂ ಆಹಾರ ನೀಡುವನು. ಅವು ಬೆಳಗ್ಗೆ ಖಾಲಿ ಹೊಟ್ಟೆಯಿಂದ ಹೊರಟು ಸಂಜೆ ತುಂಬಿದ ಹೊಟ್ಟೆಯೊಂದಿಗೆ ಮರಳುತ್ತವೆ."
Sahih/Authentic. - Ibn Maajah

ವಿವರಣೆ

ಪ್ರಾಪಂಚಿಕ ಮತ್ತು ಧಾರ್ಮಿಕವಾದ ಎಲ್ಲಾ ವಿಷಯಗಳಲ್ಲೂ ಲಾಭವನ್ನುಂಟು ಮಾಡಲು ಮತ್ತು ಹಾನಿಯನ್ನು ನಿವಾರಿಸಲು ಅಲ್ಲಾಹನ ಮೇಲೆ ಅವಲಂಬಿತರಾಗಬೇಕೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಒತ್ತಾಯಿಸುತ್ತಿದ್ದಾರೆ. ಏಕೆಂದರೆ, ಸರ್ವಶಕ್ತನಾದ ಅಲ್ಲಾಹನಲ್ಲದೆ ಕೊಡುವವರಿಲ್ಲ, ತಡೆಯುವವರಿಲ್ಲ, ತೊಂದರೆ ಕೊಡುವವರಿಲ್ಲ ಮತ್ತು ಉಪಕಾರ ಮಾಡುವವರಿಲ್ಲ. ಅಲ್ಲಾಹನಲ್ಲಿ ಪ್ರಾಮಾಣಿಕವಾಗಿ ಅವಲಂಬಿತರಾಗಿ ನಾವು ಲಾಭಗಳನ್ನು ತರುವ ಮತ್ತು ಹಾನಿಗಳನ್ನು ದೂರೀಕರಿಸುವ ಮಾರ್ಗಗಳನ್ನು ಹುಡುಕಬೇಕಾಗಿದೆ. ನಾವು ಹೀಗೆ ಮಾಡಿದರೆ ಹಕ್ಕಿಗಳಿಗೆ ಆಹಾರ ನೀಡುವಂತೆ ಅಲ್ಲಾಹು ನಮಗೂ ಆಹಾರ ನೀಡುತ್ತಾನೆ. ಅವು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಹೊರಟು ಸಂಜೆ ತುಂಬಿದ ಹೊಟ್ಟೆಯೊಂದಿಗೆ ಮರಳುತ್ತವೆ. ಹಕ್ಕಿಗಳ ಈ ವರ್ತನೆಯು ಆಹಾರವನ್ನು ಹುಡುಕುವ ಸರಿಯಾದ ಮಾರ್ಗವಾಗಿದೆ. ಅವು ಅಲ್ಲಾಹನ ಮೇಲೆ ಭರವಸೆಯಿಟ್ಟು ಗೂಡಿನಲ್ಲಿ ಕೂರುವುದಾಗಲಿ ಸೋಮಾರಿತನ ಪ್ರದರ್ಶಿಸುವುದಾಗಲಿ ಮಾಡುವುದಿಲ್ಲ.

ಹದೀಸಿನ ಪ್ರಯೋಜನಗಳು

  1. ಅಲ್ಲಾಹನ ಮೇಲೆ ಅವಲಂಬಿತರಾಗುವ ಮತ್ತು ಅದು ಜೀವನೋಪಾಯವನ್ನು ಪಡೆಯುವ ಅತಿದೊಡ್ಡ ಮಾರ್ಗವಾಗಿದೆಯೆಂದು ಈ ಹದೀಸ್ ತಿಳಿಸುತ್ತದೆ.
  2. ಮಾರ್ಗಗಳನ್ನು ಹುಡುಕುವುದು ಅವಲಂಬನೆಗೆ ವಿರುದ್ಧವಲ್ಲ. ಬೆಳಗ್ಗೆ ಆಹಾರವನ್ನು ಹುಡುಕುತ್ತಾ ಹೋಗಿ ಸಂಜೆ ಮರಳುವುದು ವಸ್ತುನಿಷ್ಠವಾದ ಅವಲಂಬನೆಗೆ ವಿರುದ್ಧವಲ್ಲ ಎಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಈ ಹದೀಸಿನಲ್ಲಿ ತಿಳಿಸಿದ್ದಾರೆ.
  3. ಹೃದಯದ ಕರ್ಮಗಳಿಗೆ ಇಸ್ಲಾಂ ಧರ್ಮವು ನೀಡುವ ಪ್ರಾಮುಖ್ಯತೆಯನ್ನು ಈ ಹದೀಸ್ ತಿಳಿಸುತ್ತದೆ. ಏಕೆಂದರೆ ತವಕ್ಕುಲ್ (ಅಲ್ಲಾಹನ ಮೇಲೆ ಅವಲಂಬಿತವಾಗುವುದು) ಹೃದಯದ ಕರ್ಮವಾಗಿದೆ.
  4. (ಅಲ್ಲಾಹನ ಮೇಲೆ ಅವಲಂಬಿತವಾಗದೆ) ಕೇವಲ ಮಾರ್ಗಗಳ ಮೇಲೆ ಅವಲಂಬಿತವಾಗುವುದು ಧರ್ಮದಲ್ಲಿನ ಕೊರತೆಯಾಗಿದೆ ಮತ್ತು (ಅಲ್ಲಾಹನ ಮೇಲೆ ಅವಲಂಬಿತವಾಗಿ) ಮಾರ್ಗಗಳನ್ನು ತೊರೆಯುವುದು ಬುದ್ಧಿಯ ಕೊರತೆಯಾಗಿದೆ.

ವರ್ಗಗಳು

ಯಶಸ್ವಿಯಾಗಿ ರವಾನಿಸಲಾಗಿದೆ!