“ಸೌಮ್ಯವಾಗಿ ಮಾರಾಟ ಮಾಡುವ, ಖರೀದಿಸುವ ಮತ್ತು ಸಾಲ ಮರುಪಾವತಿಯನ್ನು ಕೇಳುವ ವ್ಯಕ್ತಿಗೆ ಅಲ್ಲಾಹು ದಯೆ ತೋರಲಿ.”...

Scan the qr code to link to this page

ಹದೀಸ್
ವಿವರಣೆ
ಅನುವಾದಗಳನ್ನು ತೋರಿಸಿ
ಹದೀಸಿನ ಪ್ರಯೋಜನಗಳು
ವರ್ಗಗಳು
ಇನ್ನಷ್ಟು
ಜಾಬಿರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಸೌಮ್ಯವಾಗಿ ಮಾರಾಟ ಮಾಡುವ, ಖರೀದಿಸುವ ಮತ್ತು ಸಾಲ ಮರುಪಾವತಿಯನ್ನು ಕೇಳುವ ವ್ಯಕ್ತಿಗೆ ಅಲ್ಲಾಹು ದಯೆ ತೋರಲಿ.”
Sahih/Authentic. - Al-Bukhari

ವಿವರಣೆ

ಮಾರಾಟ ಮಾಡುವಾಗ ಸರಳ, ಉದಾರ ಮತ್ತು ಕೊಡುಗೈಯಾಗಿರುವ ವ್ಯಕ್ತಿಗೆ ದಯೆ ತೋರಬೇಕೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಪ್ರಾರ್ಥಿಸುತ್ತಾರೆ. ಆದ್ದರಿಂದ ಬೆಲೆಯ ವಿಷಯದಲ್ಲಿ ಗ್ರಾಹಕನೊಂದಿಗೆ ಕಠೋರವಾಗಿ ವರ್ತಿಸಬಾರದು, ಉತ್ತಮ ಗುಣದಿಂದ ವ್ಯವಹರಿಸಬೇಕು. ಖರೀದಿಸುವಾಗ ಸರಳ, ಉದಾರ ಮತ್ತು ಕೊಡುಗೈಯಾಗಿರಬೇಕು. ಜಿಪುಣತನ ತೋರಬಾರದು ಮತ್ತು ವಸ್ತುವಿನ ಮೌಲ್ಯಕ್ಕಿಂತ ಕಡಿಮೆ ಹಣ ಕೊಡಬಾರದು. ಸಾಲ ಮರುಪಾವತಿಯನ್ನು ಕೇಳುವಾಗ ಸರಳ, ಉದಾರ ಮತ್ತು ಕೊಡುಗೈಯಾಗಿರಬೇಕು. ಬಡವರು ಮತ್ತು ಕಷ್ಟದಲ್ಲಿರುವವರನ್ನು ಸತಾಯಿಸಬಾರದು. ಬದಲಿಗೆ, ಮೃದುವಾಗಿ ಸೌಮ್ಯವಾಗಿ ಕೇಳಬೇಕು. ಕಷ್ಟದಲ್ಲಿರುವವರಿಗೆ ಮರುಪಾವತಿಗಾಗಿ ಸಮಯವನ್ನು ಹೆಚ್ಚಿಸಬೇಕು.

ಹದೀಸಿನ ಪ್ರಯೋಜನಗಳು

  1. ಜನರ ನಡುವಿನ ಸಂಬಂಧಗಳನ್ನು ಸುಧಾರಿಸಲು ಕಾಳಜಿ ವಹಿಸುವುದು ಶರಿಯತ್‌ನ (ಇಸ್ಲಾಮಿ ಧರ್ಮಸಂಹಿತೆಯ) ಉದ್ದೇಶಗಳಲ್ಲಿ ಒಂದಾಗಿದೆ.
  2. ಖರೀದಿ, ಮಾರಾಟ ಮುಂತಾದ ಜನರ ನಡುವಿನ ವ್ಯವಹಾರಗಳಲ್ಲಿ ಅತ್ಯುತ್ತಮ ಗುಣವನ್ನು ಪ್ರದರ್ಶಿಸಬೇಕೆಂದು ಈ ಹದೀಸಿನಲ್ಲಿ ಒತ್ತಾಯಿಸಲಾಗಿದೆ.

ವರ್ಗಗಳು

ಯಶಸ್ವಿಯಾಗಿ ರವಾನಿಸಲಾಗಿದೆ!