“ಒಬ್ಬ ಮುಸಲ್ಮಾನನಿಗೆ ಇನ್ನೊಬ್ಬ ಮುಸಲ್ಮಾನನ ಮೇಲೆ ಐದು ಹಕ್ಕುಗಳಿವೆ: ಸಲಾಂ ಹೇಳಿದರೆ ಉತ್ತರಿಸುವುದು, ರೋಗಿಯನ್ನು ಭೇಟಿ ಮಾಡುವುದು, ಮೃತದೇಹವನ್ನು ಹಿಂಬಾಲಿಸುವುದು, ಆಮಂತ್ರಣವನ್ನು ಸ್ವೀಕರಿಸುವುದು ಮತ್ತು ಸೀನಿದರೆ ತಶ್ಮೀತ್ ಮಾಡುವುದು.”...

Scan the qr code to link to this page

ಹದೀಸ್
ವಿವರಣೆ
ಅನುವಾದಗಳನ್ನು ತೋರಿಸಿ
ಹದೀಸಿನ ಪ್ರಯೋಜನಗಳು
ವರ್ಗಗಳು
ಇನ್ನಷ್ಟು
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: “ಒಬ್ಬ ಮುಸಲ್ಮಾನನಿಗೆ ಇನ್ನೊಬ್ಬ ಮುಸಲ್ಮಾನನ ಮೇಲೆ ಐದು ಹಕ್ಕುಗಳಿವೆ: ಸಲಾಂ ಹೇಳಿದರೆ ಉತ್ತರಿಸುವುದು, ರೋಗಿಯನ್ನು ಭೇಟಿ ಮಾಡುವುದು, ಮೃತದೇಹವನ್ನು ಹಿಂಬಾಲಿಸುವುದು, ಆಮಂತ್ರಣವನ್ನು ಸ್ವೀಕರಿಸುವುದು ಮತ್ತು ಸೀನಿದರೆ ತಶ್ಮೀತ್ ಮಾಡುವುದು.”
Sahih/Authentic. - Al-Bukhari and Muslim

ವಿವರಣೆ

ಒಬ್ಬ ಮುಸಲ್ಮಾನನಿಗೆ ಇನ್ನೊಬ್ಬ ಮುಸಲ್ಮಾನನ ಮೇಲಿರುವ ಕೆಲವು ಹಕ್ಕುಗಳನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ವಿವರಿಸುತ್ತಾರೆ. ಮೊದಲನೆಯ ಹಕ್ಕು, ಮುಸಲ್ಮಾನನು ಸಲಾಂ ಹೇಳಿದರೆ ಅದಕ್ಕೆ ಉತ್ತರಿಸುವುದು. ಎರಡನೆಯ ಹಕ್ಕು: ರೋಗಿಯಾದರೆ ಅವನನ್ನು ಭೇಟಿ ಮಾಡುವುದು. ಮೂರನೆಯ ಹಕ್ಕು: ಅವನ ಮೃತದೇಹವನ್ನು ಮನೆಯಿಂದ ನಮಾಝ್ ಮಾಡುವ ಸ್ಥಳದವರೆಗೆ, ಅಲ್ಲಿಂದ ದಫನ ಮಾಡುವ ಸ್ಥಳದವರೆಗೆ ದಫನ ಕಾರ್ಯ ಮುಗಿಯುವ ತನಕ ಹಿಂಬಾಲಿಸುವುದು. ನಾಲ್ಕನೆಯ ಹಕ್ಕು: ಅವನು ಮದುವೆಯ ಔತಣ ಅಥವಾ ಇತರ ಸಮಾರಂಭಗಳಿಗೆ ಆಮಂತ್ರಿಸಿದರೆ ಆಮಂತ್ರಣವನ್ನು ಸ್ವೀಕರಿಸುವುದು. ಐದನೆಯ ಹಕ್ಕು: ಸೀನಿದ ನಂತರ ಅವನು “ಅಲ್-ಹಮ್ದುಲಿಲ್ಲಾಹ್” ಎಂದು ಹೇಳಿದರೆ “ಯರ್ಹಮುಕಲ್ಲಾಹ್” ಎಂದು ಹೇಳುವುದು, ನಂತರ ಅವನು ಅದಕ್ಕೆ ಉತ್ತರವಾಗಿ “ಯಹ್ದೀಕುಮುಲ್ಲಾಹು ವಯುಸ್ಲಿಹು ಬಾಲಕುಮ್” ಎಂದು ಹೇಳುವುದು.

ಹದೀಸಿನ ಪ್ರಯೋಜನಗಳು

  1. ಮುಸಲ್ಮಾನರು ಪರಸ್ಪರ ಹೊಂದಿರುವ ಹಕ್ಕುಗಳಿಗೆ ಒತ್ತು ಕೊಟ್ಟಿರುವುದು ಮತ್ತು ಅವರ ನಡುವಿನ ಬಾಂಧವ್ಯ ಹಾಗೂ ಪ್ರೀತಿಗೆ ಬಲ ನೀಡಿರುವುದು ಇಸ್ಲಾಂ ಧರ್ಮದ ಶ್ರೇಷ್ಠ ಗುಣವಾಗಿದೆ.

ವರ್ಗಗಳು

ಯಶಸ್ವಿಯಾಗಿ ರವಾನಿಸಲಾಗಿದೆ!