“ಒಬ್ಬ ವ್ಯಕ್ತಿ ತನ್ನ ಸಹೋದರನನ್ನು ಪ್ರೀತಿಸಿದರೆ, ತಾನು ಅವನನ್ನು ಪ್ರೀತಿಸುತ್ತೇನೆಂದು ಅವನಿಗೆ ತಿಳಿಸಬೇಕು.”...

Scan the qr code to link to this page

ಹದೀಸ್
ವಿವರಣೆ
ಅನುವಾದಗಳನ್ನು ತೋರಿಸಿ
ಹದೀಸಿನ ಪ್ರಯೋಜನಗಳು
ವರ್ಗಗಳು
ಇನ್ನಷ್ಟು
ಮಿಕ್‌ದಾಮ್ ಬಿನ್ ಮಅದೀಕರಿಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಒಬ್ಬ ವ್ಯಕ್ತಿ ತನ್ನ ಸಹೋದರನನ್ನು ಪ್ರೀತಿಸಿದರೆ, ತಾನು ಅವನನ್ನು ಪ್ರೀತಿಸುತ್ತೇನೆಂದು ಅವನಿಗೆ ತಿಳಿಸಬೇಕು.”
Sahih/Authentic. - At-Tirmidhi

ವಿವರಣೆ

ಈ ಹದೀಸಿನಲ್ಲಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸತ್ಯವಿಶ್ವಾಸಿಗಳ ನಡುವಿನ ಬಾಂಧವ್ಯವನ್ನು ಬಲಪಡಿಸುವ ಮತ್ತು ಅವರ ನಡುವೆ ಪ್ರೀತಿಯನ್ನು ಹಬ್ಬಿಸುವ ಒಂದು ಮಾರ್ಗವನ್ನು ವಿವರಿಸಿದ್ದಾರೆ. ಅದೇನೆಂದರೆ, ಒಬ್ಬ ವ್ಯಕ್ತಿ ತನ್ನ ಮುಸ್ಲಿಂ ಸಹೋದರನನ್ನು ಪ್ರೀತಿಸಿದರೆ, ತಾನು ಅವನನ್ನು ಪ್ರೀತಿಸುತ್ತೇನೆಂದು ಅವನಿಗೆ ತಿಳಿಸುವುದು.

ಹದೀಸಿನ ಪ್ರಯೋಜನಗಳು

  1. ಭೌತಿಕ ಹಿತಾಸಕ್ತಿಯಿಲ್ಲದೆ, ಕೇವಲ ಅಲ್ಲಾಹನಿಗಾಗಿ ಮಾತ್ರ ಪ್ರೀತಿಸುವುದರ ಶ್ರೇಷ್ಠತೆಯನ್ನು ಈ ಹದೀಸ್ ವ್ಯಕ್ತಪಡಿಸುತ್ತದೆ.
  2. ಒಬ್ಬ ವ್ಯಕ್ತಿ ಅಲ್ಲಾಹನಿಗಾಗಿ ಇನ್ನೊಬ್ಬ ವ್ಯಕ್ತಿಯನ್ನು ಪ್ರೀತಿಸಿದರೆ, ಅದನ್ನು ಅವನಿಗೆ ತಿಳಿಸುವುದು ಅಪೇಕ್ಷಣೀಯವಾಗಿದೆ. ಇದರಿಂದ ಅವರ ನಡುವೆ ಪ್ರೀತಿ ಮತ್ತು ಅನ್ಯೋನ್ಯತೆಯು ಹೆಚ್ಚುತ್ತದೆ.
  3. ಸತ್ಯವಿಶ್ವಾಸಿಗಳ ನಡುವೆ ಪ್ರೀತಿ ಹರಡುವುದರಿಂದ ಸತ್ಯವಿಶ್ವಾಸದ ಆಧಾರದಲ್ಲಿರುವ ಸಹೋದರತೆಯು ಪ್ರಬಲವಾಗುವುದು ಮಾತ್ರವಲ್ಲದೆ, ಮುಸ್ಲಿಂ ಸಮಾಜದಲ್ಲಿ ಒಡಕು ಹಾಗೂ ಭಿನ್ನಮತಗಳು ನಿವಾರಣೆಯಾಗುತ್ತವೆ.

ವರ್ಗಗಳು

ಯಶಸ್ವಿಯಾಗಿ ರವಾನಿಸಲಾಗಿದೆ!