ಈ ದಿನಗಳ ಹೊರತು ಅಲ್ಲಾಹನಿಗೆ ಸತ್ಕರ್ಮಗಳು ಹೆಚ್ಚು ಇಷ್ಟವಾಗುವ ಬೇರೆ ದಿನಗಳಿಲ್ಲ." ಅಂದರೆ, ದುಲ್‌ಹಿಜ್ಜ ತಿಂಗಳ ಮೊದಲ ಹತ್ತು ದಿನಗಳು...

Scan the qr code to link to this page

ಹದೀಸ್
ವಿವರಣೆ
ಅನುವಾದಗಳನ್ನು ತೋರಿಸಿ
ಹದೀಸಿನ ಪ್ರಯೋಜನಗಳು
ವರ್ಗಗಳು
ಇನ್ನಷ್ಟು
ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಈ ದಿನಗಳ ಹೊರತು ಅಲ್ಲಾಹನಿಗೆ ಸತ್ಕರ್ಮಗಳು ಹೆಚ್ಚು ಇಷ್ಟವಾಗುವ ಬೇರೆ ದಿನಗಳಿಲ್ಲ." ಅಂದರೆ, ದುಲ್‌ಹಿಜ್ಜ ತಿಂಗಳ ಮೊದಲ ಹತ್ತು ದಿನಗಳು. ಅವರು ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ಅಲ್ಲಾಹನ ಮಾರ್ಗದಲ್ಲಿ ಮಾಡುವ ಜಿಹಾದ್ ಕೂಡ (ಅವನಿಗೆ ಇಷ್ಟವಿಲ್ಲವೇ)?" ಅವರು ಹೇಳಿದರು: "ಅಲ್ಲಾಹನ ಮಾರ್ಗದಲ್ಲಿ ಮಾಡುವ ಜಿಹಾದ್ ಕೂಡ (ಅವನಿಗೆ ಇಷ್ಟವಿಲ್ಲ). ಆದರೆ ಒಬ್ಬ ವ್ಯಕ್ತಿ ತನ್ನ ದೇಹ ಮತ್ತು ಆಸ್ತಿಯೊಂದಿಗೆ ರಣರಂಗಕ್ಕೆ ಹೊರಟು ಎರಡನ್ನೂ ಅಲ್ಲೇ ತ್ಯಜಿಸಿ ಬರುವ ಹೊರತು."
Sahih/Authentic. - Al-Bukhari

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ದುಲ್-ಹಿಜ್ಜ ತಿಂಗಳ ಮೊದಲ ಹತ್ತು ದಿನಗಳಲ್ಲಿ ಮಾಡುವ ಸತ್ಕರ್ಮಗಳು ವರ್ಷದ ಇತರ ದಿನಗಳಲ್ಲಿ ಮಾಡುವ ಸತ್ಕರ್ಮಗಳಿಗಿಂತಲೂ ಶ್ರೇಷ್ಠವಾಗಿದೆ. ಆಗ ಸಹಾಬಿಗಳು (ಸಂಗಡಿಗರು) (ಅವರೆಲ್ಲರ ಬಗ್ಗೆ ಅಲ್ಲಾಹು ಸಂಪ್ರೀತನಾಗಲಿ) ಇತರ ದಿನಗಳಲ್ಲಿ ಮಾಡುವ ಜಿಹಾದ್‌ನ ಬಗ್ಗೆ, ಅದು ಈ ದಿನಗಳಲ್ಲಿ ಮಾಡುವ ಸತ್ಕರ್ಮಗಳಿಗಿಂತಲೂ ಶ್ರೇಷ್ಠವಲ್ಲವೇ? ಎಂದು ಕೇಳಿದರು. ಏಕೆಂದರೆ ಅವರ ದೃಷ್ಟಿಕೋನದಲ್ಲಿ ಜಿಹಾದ್ ಅತಿ ಶ್ರೇಷ್ಠ ಸತ್ಕರ್ಮವಾಗಿತ್ತು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತರಿಸಿದರು: ಇತರ ದಿನಗಳಲ್ಲಿ ಮಾಡುವ ಜಿಹಾದ್‌ಗಿಂತಲೂ ಈ ದಿನಗಳಲ್ಲಿ ಮಾಡುವ ಸತ್ಕರ್ಮಗಳು ಶ್ರೇಷ್ಠವಾಗಿವೆ. ಆದರೆ ಒಬ್ಬ ವ್ಯಕ್ತಿ ತನ್ನ ದೇಹ ಮತ್ತು ಆಸ್ತಿಯನ್ನು ಪಣವಾಗಿಟ್ಟು ಅಲ್ಲಾಹನ ಮಾರ್ಗದಲ್ಲಿ ಜಿಹಾದ್ ಮಾಡಲು ಹೊರಟು, ನಂತರ ಅಲ್ಲಾಹನ ಮಾರ್ಗದಲ್ಲಿ ತನ್ನ ಆಸ್ತಿಯನ್ನು ಹಾಗೂ ಆತ್ಮವನ್ನು ಕಳಕೊಳ್ಳುವುದರ ಹೊರತು. ಇದು ಈ ಶ್ರೇಷ್ಠ ದಿನಗಳಲ್ಲಿ ಮಾಡುವ ಸತ್ಕರ್ಮಗಳಿಗಿಂತಲೂ ಹೆಚ್ಚು ಶ್ರೇಷ್ಠವಾಗಿದೆ.

ಹದೀಸಿನ ಪ್ರಯೋಜನಗಳು

  1. ದುಲ್‌ಹಿಜ್ಜ ತಿಂಗಳ ಮೊದಲ ಹತ್ತು ದಿನಗಳಲ್ಲಿ ಮಾಡುವ ಸತ್ಕರ್ಮಗಳ ಶ್ರೇಷ್ಠತೆಯನ್ನು ಈ ಹದೀಸ್ ತಿಳಿಸುತ್ತದೆ. ಆದ್ದರಿಂದ ಮುಸಲ್ಮಾನರು ಈ ದಿನಗಳನ್ನು ಸದುಪಯೋಗಪಡಿಸಬೇಕು ಮತ್ತು ಈ ದಿನಗಳಲ್ಲಿ ಅಲ್ಲಾಹನನ್ನು ಸ್ಮರಿಸುವುದು, ಕುರ್‌ಆನ್ ಪಠಿಸುವುದು, ತಕ್ಬೀರ್, ತಹ್ಲೀಲ್ ಮತ್ತು ತಹ್ಮೀದ್‌ಗಳನ್ನು ಹೇಳುವುದು, ನಮಾಝ್ ಮತ್ತು ದಾನ ಧರ್ಮ ಮಾಡುವುದು, ಉಪವಾಸ ಆಚರಿಸುವುದು ಮುಂತಾದ ಎಲ್ಲಾ ರೀತಿಯ ಸತ್ಕರ್ಮಗಳನ್ನು ಹೆಚ್ಚಿಸಬೇಕು.

ವರ್ಗಗಳು

ಯಶಸ್ವಿಯಾಗಿ ರವಾನಿಸಲಾಗಿದೆ!