“ಐದು ವೇಳೆಯ ನಮಾಝ್‌ಗಳು, ಒಂದು ಜುಮುಅದಿಂದ ಇನ್ನೊಂದು ಜುಮುಅ, ಒಂದು ರಮದಾನ್‌ನಿಂದ ಇನ್ನೊಂದು ರಮದಾನ್, ಅವುಗಳ ನಡುವಿನ ಪಾಪಗಳಿಗೆ ಪರಿಹಾರವಾಗಿದೆ; ಮಹಾಪಾಪಗಳಿಂದ ದೂರವಿದ್ದರೆ.”...

Scan the qr code to link to this page

ಹದೀಸ್
ವಿವರಣೆ
ಅನುವಾದಗಳನ್ನು ತೋರಿಸಿ
ಹದೀಸಿನ ಪ್ರಯೋಜನಗಳು
ವರ್ಗಗಳು
ಇನ್ನಷ್ಟು
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುತ್ತಿದ್ದರು: “ಐದು ವೇಳೆಯ ನಮಾಝ್‌ಗಳು, ಒಂದು ಜುಮುಅದಿಂದ ಇನ್ನೊಂದು ಜುಮುಅ, ಒಂದು ರಮದಾನ್‌ನಿಂದ ಇನ್ನೊಂದು ರಮದಾನ್, ಅವುಗಳ ನಡುವಿನ ಪಾಪಗಳಿಗೆ ಪರಿಹಾರವಾಗಿದೆ; ಮಹಾಪಾಪಗಳಿಂದ ದೂರವಿದ್ದರೆ.”
Sahih/Authentic. - Muslim

ವಿವರಣೆ

ಹಗಲು-ರಾತ್ರಿಯಲ್ಲಿ ಕಡ್ಡಾಯವಾಗಿರುವ ಐದು ವೇಳೆಯ ನಮಾಝ್‌ಗಳು, ಪ್ರತಿ ಶುಕ್ರವಾರ ನಿರ್ವಹಿಸುವ ಜುಮುಅ ನಮಾಝ್, ಪ್ರತಿ ವರ್ಷ ರಮದಾನ್ ತಿಂಗಳಲ್ಲಿ ಆಚರಿಸುವ ಉಪವಾಸಗಳು, ಅವುಗಳ ನಡುವೆ ಸಂಭವಿಸುವ ಕಿರುಪಾಪಗಳಿಗೆ ಪರಿಹಾರವಾಗಿದೆ. ಆದರೆ ಮಹಾಪಾಪಗಳಿಂದ ದೂರವಿರುವವರಿಗೆ ಮಾತ್ರ. ವ್ಯಭಿಚಾರ, ಮದ್ಯಪಾನ ಮುಂತಾದ ಮಹಾಪಾಪಗಳು ಪಶ್ಚಾತ್ತಾಪದಿಂದಲ್ಲದೆ ಪರಿಹಾರವಾಗುವುದಿಲ್ಲ.

ಹದೀಸಿನ ಪ್ರಯೋಜನಗಳು

  1. ಪಾಪಗಳಲ್ಲಿ ಕಿರುಪಾಪಗಳು ಮತ್ತು ಮಹಾಪಾಪಗಳಿವೆ ಎಂಬುದನ್ನು ಈ ಹದೀಸ್ ತಿಳಿಸುತ್ತದೆ.
  2. ಕಿರುಪಾಪಗಳು ಪರಿಹಾರವಾಗಬೇಕಾದರೆ ಮಹಾ ಪಾಪಗಳಿಂದ ದೂರವಿರಬೇಕಾದ ಷರತ್ತು ಇದೆ.
  3. ವ್ಯಭಿಚಾರ, ಮದ್ಯಪಾನ ಮುಂತಾದ ಇಹಲೋಕದಲ್ಲೇ ಶಿಕ್ಷೆ ನಿಗದಿಪಡಿಸಲಾದ, ಅಥವಾ ಪರಲೋಕದಲ್ಲಿ ಉಗ್ರ ಶಿಕ್ಷೆಯಿದೆಯೆಂದು, ಅಥವಾ ಅಲ್ಲಾಹನ ಕೋಪಕ್ಕೆ ಗುರಿಯಾಗಬೇಕಾದೀತೆಂದು ಎಚ್ಚರಿಸಲಾದ, ಅಥವಾ ಅದರ ಬಗ್ಗೆ ಬೆದರಿಸಲಾದ, ಅಥವಾ ಅದನ್ನು ಮಾಡುವವನನ್ನು ಶಪಿಸಲಾದ ಪಾಪಗಳೆಲ್ಲವೂ ಮಹಾಪಾಪಗಳಾಗಿವೆ.

ವರ್ಗಗಳು

ಯಶಸ್ವಿಯಾಗಿ ರವಾನಿಸಲಾಗಿದೆ!