ಸಮಾಧಿಗಳ ಮೇಲೆ ಕೂರಬೇಡಿ ಮತ್ತು ಅವುಗಳ ಕಡೆಗೆ ನಮಾಝ್ ಮಾಡಬೇಡಿ

Scan the qr code to link to this page

ಹದೀಸ್
ವಿವರಣೆ
ಅನುವಾದಗಳನ್ನು ತೋರಿಸಿ
ಹದೀಸಿನ ಪ್ರಯೋಜನಗಳು
ವರ್ಗಗಳು
ಇನ್ನಷ್ಟು
ಅಬೂ ಮರ್ಸದ್ ಗನವಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಸಮಾಧಿಗಳ ಮೇಲೆ ಕೂರಬೇಡಿ ಮತ್ತು ಅವುಗಳ ಕಡೆಗೆ ನಮಾಝ್ ಮಾಡಬೇಡಿ."
Sahih/Authentic. - Muslim

ವಿವರಣೆ

ಸಮಾಧಿಗಳ ಮೇಲೆ ಕೂರುವುದನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿರೋಧಿಸಿದ್ದಾರೆ. ಅದೇ ರೀತಿ, ಸಮಾಧಿಗಳ ಕಡೆಗೆ ನಮಾಝ್ ಮಾಡುವುದನ್ನೂ ವಿರೋಧಿಸಿದ್ದಾರೆ. ಅಂದರೆ ಸಮಾಧಿಯು ಕಿಬ್ಲದ ದಿಕ್ಕಿನಲ್ಲಿರುವ ಸ್ಥಿತಿಯಲ್ಲಿ ಅದರ ಹಿಂದೆ ನಮಾಝ್ ಮಾಡುವುದು. ಏಕೆಂದರೆ ಇದು ಬಹುದೇವಾರಾಧನೆಗೆ ಕಾರಣವಾಗುತ್ತದೆ.

ಹದೀಸಿನ ಪ್ರಯೋಜನಗಳು

  1. ಸಮಾಧಿ ಸ್ಥಳದಲ್ಲಿ, ಸಮಾಧಿಗಳ ಮಧ್ಯೆ ಅಥವಾ ಸಮಾಧಿಗಳ ಕಡೆಗೆ ನಮಾಝ್ ಮಾಡುವುದನ್ನು ವಿರೋಧಿಸಲಾಗಿದೆಯೆಂದು ಈ ಹದೀಸ್ ತಿಳಿಸುತ್ತದೆ. ಆದರೆ ಅಂತ್ಯಕ್ರಿಯೆಯ (ಜನಾಝ) ನಮಾಝ್ ಇದಕ್ಕೆ ಹೊರತಾಗಿದೆ. ಅದನ್ನು ಸಮಾಧಿ ಸ್ಥಳದಲ್ಲಿ ನಿರ್ವಹಿಸಬಹುದೆಂದು ಸುನ್ನತ್ತಿನಲ್ಲಿ ಸಾಬೀತಾಗಿದೆ.
  2. ಬಹುದೇವಾರಾಧನೆಗೆ ಕಾರಣವಾಗುವ ಮಾರ್ಗವನ್ನು ಮುಚ್ಚುವುದಕ್ಕಾಗಿ ಸಮಾಧಿಗಳ ಕಡೆಗೆ ನಮಾಝ್ ಮಾಡುವುದನ್ನು ವಿರೋಧಿಸಲಾಗಿದೆಯೆಂದು ಈ ಹದೀಸ್ ತಿಳಿಸುತ್ತದೆ.
  3. ಸಮಾಧಿಗಳನ್ನು ಮಿತಿ ಮೀರಿ ಗೌರವಿಸುವುದು ಮತ್ತು ಅವುಗಳಿಗೆ ಅಗೌರವ ತೋರುವುದು ಎರಡನ್ನೂ ಇಸ್ಲಾಂ ಧರ್ಮವು ವಿರೋಧಿಸುತ್ತದೆ.
  4. ಮುಸಲ್ಮಾನನ ಪಾವಿತ್ರ್ಯವು ಮರಣದ ನಂತರವೂ ಉಳಿಯುತ್ತದೆ. ಏಕೆಂದರೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳುತ್ತಾರೆ: "ಮೃತವ್ಯಕ್ತಿಯ ಮೂಳೆಗಳನ್ನು ತುಂಡು ಮಾಡುವುದು ಜೀವಂತ ವ್ಯಕ್ತಿಯ ಮೂಳೆಗಳನ್ನು ತುಂಡು ಮಾಡುವುದಕ್ಕೆ ಸಮ."

ವರ್ಗಗಳು

ಯಶಸ್ವಿಯಾಗಿ ರವಾನಿಸಲಾಗಿದೆ!