ಸರ್ವಶಕ್ತನಾದ ನಮ್ಮ ಪರಿಪಾಲಕನು (ಅಲ್ಲಾಹು) ಪ್ರತಿ ರಾತ್ರಿಯೂ, ಅದರ ಮೂರನೇ ಒಂದು ಭಾಗ ಉಳಿದಿರುವಾಗ, ಅತಿಕೆಳಗಿನ ಆಕಾಶಕ್ಕೆ ಇಳಿಯುತ್ತಾನೆ...

Scan the qr code to link to this page

ಹದೀಸ್
ವಿವರಣೆ
ಅನುವಾದಗಳನ್ನು ತೋರಿಸಿ
ಹದೀಸಿನ ಪ್ರಯೋಜನಗಳು
ವರ್ಗಗಳು
ಇನ್ನಷ್ಟು
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಸರ್ವಶಕ್ತನಾದ ನಮ್ಮ ಪರಿಪಾಲಕನು (ಅಲ್ಲಾಹು) ಪ್ರತಿ ರಾತ್ರಿಯೂ, ಅದರ ಮೂರನೇ ಒಂದು ಭಾಗ ಉಳಿದಿರುವಾಗ, ಅತಿಕೆಳಗಿನ ಆಕಾಶಕ್ಕೆ ಇಳಿಯುತ್ತಾನೆ. ನಂತರ ಹೇಳುತ್ತಾನೆ: "ನನ್ನನ್ನು ಕರೆದು ಪ್ರಾರ್ಥಿಸುವವರು ಯಾರು? ಅವರಿಗೆ ನಾನು ಉತ್ತರ ನೀಡುವೆನು. ನನ್ನಲ್ಲಿ ಬೇಡುವವರು ಯಾರು? ಅವರಿಗೆ ನಾನು ನೀಡುವೆನು. ನನ್ನಲ್ಲಿ ಕ್ಷಮೆ ಕೇಳುವವರು ಯಾರು? ಅವರಿಗೆ ನಾನು ಕ್ಷಮಿಸುವೆನು."
Sahih/Authentic. - Al-Bukhari and Muslim

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಸರ್ವಶಕ್ತನಾದ ನಮ್ಮ ಪರಿಪಾಲಕನು (ಅಲ್ಲಾಹು) ಪ್ರತಿ ರಾತ್ರಿಯೂ, ಅದರ ಮೂರನೇ ಒಂದು ಭಾಗ ಉಳಿದಿರುವಾಗ, ಅತಿಕೆಳಗಿನ ಆಕಾಶಕ್ಕೆ ಇಳಿದು ಬರುತ್ತಾನೆ. ನಂತರ ತನ್ನನ್ನು ಕರೆದು ಪ್ರಾರ್ಥಿಸಲು ತನ್ನ ದಾಸರಿಗೆ ಒತ್ತಾಯಿಸುತ್ತಾನೆ. ಅವನನ್ನು ಕರೆದು ಪ್ರಾರ್ಥಿಸಿದವರಿಗೆ ಅವನು ಉತ್ತರ ನೀಡುತ್ತಾನೆ. ಅವರಿಗೆ ಬೇಕಾದುದನ್ನು ತನ್ನೊಡನೆ ಬೇಡಿಕೊಳ್ಳುವಂತೆ ಅವರಿಗೆ ಪ್ರೋತ್ಸಾಹಿಸುತ್ತಾನೆ. ಅವರು ಬೇಡಿದ್ದನ್ನು ಅವನು ಅವರಿಗೆ ನೀಡುತ್ತಾನೆ. ಅವರ ಪಾಪಗಳಿಗೆ ಕ್ಷಮೆ ಕೋರುವಂತೆ ಅವನು ಅವರಿಗೆ ಉತ್ತೇಜಿಸುತ್ತಾನೆ. ಅವನ ಸತ್ಯವಿಶ್ವಾಸಿ ದಾಸರಿಗೆ ಅವನು ಕ್ಷಮಿಸುತ್ತಾನೆ.

ಹದೀಸಿನ ಪ್ರಯೋಜನಗಳು

  1. ರಾತ್ರಿಯ ಕೊನೆಯ ಮೂರನೇ ಒಂದು ಹಂತದ ಶ್ರೇಷ್ಠತೆಯನ್ನು ಮತ್ತು ಅದರಲ್ಲಿ ನಮಾಝ್, ಪ್ರಾರ್ಥನೆ, ಕ್ಷಮೆಯಾಚನೆ ಮುಂತಾದವುಗಳನ್ನು ಮಾಡುವುದರ ಶ್ರೇಷ್ಠತೆಯನ್ನು ಈ ಹದೀಸ್ ತಿಳಿಸುತ್ತದೆ.
  2. ಮನುಷ್ಯನು ಈ ಹದೀಸನ್ನು ಕೇಳುವಾಗ, ಪ್ರಾರ್ಥನೆಗಳಿಗೆ ಉತ್ತರ ಸಿಗುವ ಸಮಯವನ್ನು ಸದುಪಯೋಗಪಡಿಸಲು ಅತಿಯಾದ ಉತ್ಸಾಹವನ್ನು ತೋರಬೇಕಾಗಿದೆ.

ವರ್ಗಗಳು

ಯಶಸ್ವಿಯಾಗಿ ರವಾನಿಸಲಾಗಿದೆ!