ಯಾರಾದರೂ ಭವಿಷ್ಯ ನುಡಿಯುವವನ ಬಳಿಗೆ ಹೋಗಿ, ಅವನೊಡನೆ ಏನಾದರೂ ವಿಷಯದ ಬಗ್ಗೆ ಕೇಳಿದರೆ ಅವನ ನಲ್ವತ್ತು ದಿನಗಳ ನಮಾಝ್ ಸ್ವೀಕರಿಸಲ್ಪಡುವುದಿಲ್ಲ...

Scan the qr code to link to this page

ಹದೀಸ್
ವಿವರಣೆ
ಅನುವಾದಗಳನ್ನು ತೋರಿಸಿ
ಹದೀಸಿನ ಪ್ರಯೋಜನಗಳು
ವರ್ಗಗಳು
ಇನ್ನಷ್ಟು
ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೆಲವು ಪತ್ನಿಯರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರಾದರೂ ಭವಿಷ್ಯ ನುಡಿಯುವವನ ಬಳಿಗೆ ಹೋಗಿ, ಅವನೊಡನೆ ಏನಾದರೂ ವಿಷಯದ ಬಗ್ಗೆ ಕೇಳಿದರೆ ಅವನ ನಲ್ವತ್ತು ದಿನಗಳ ನಮಾಝ್ ಸ್ವೀಕರಿಸಲ್ಪಡುವುದಿಲ್ಲ."
Sahih/Authentic. - Muslim

ವಿವರಣೆ

ಭವಿಷ್ಯ ನುಡಿಯುವವರ ಬಳಿಗೆ ಹೋಗುವುದರ ಬಗ್ಗೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಎಚ್ಚರಿಕೆ ನೀಡುತ್ತಾರೆ.ಭವಿಷ್ಯ ನುಡಿಯುವವರು ಎಂಬುದು ಜ್ಯೋತಿಷಿಗಳು, ರಾಶಿಫಲ ನೋಡುವವರು, ಭೂಮಿಯಲ್ಲಿ ಗೆರೆ ಎಳೆಯುವವರು ಮುಂತಾದ ನಿರ್ದಿಷ್ಟ ವಸ್ತುಗಳನ್ನು ಬಳಸಿ ಭವಿಷ್ಯವನ್ನು ತಿಳಿಯುತ್ತೇವೆಂದು ವಾದಿಸುವವರಿಗೆ ಬಳಸುವ ಸಾಮಾನ್ಯ ಹೆಸರಾಗಿದೆ. ಭವಿಷ್ಯದ ಬಗ್ಗೆ ಅವರಲ್ಲಿ ಕೇವಲ ಪ್ರಶ್ನೆ ಕೇಳಿದರೂ ಅಲ್ಲಾಹು ಅವನ ನಲ್ವತ್ತು ದಿನಗಳ ನಮಾಝಿನ ಪ್ರತಿಫಲವನ್ನು ತಡೆಹಿಡಿಯುತ್ತಾನೆ. ಇದು ಈ ಪಾಪಕ್ಕೆ ಮತ್ತು ಮಹಾ ಅಪರಾಧಕ್ಕೆ ನೀಡಲಾಗುವ ಶಿಕ್ಷೆಯಾಗಿದೆ.

ಹದೀಸಿನ ಪ್ರಯೋಜನಗಳು

  1. ಭವಿಷ್ಯ ನುಡಿಯುವುದು, ಭವಿಷ್ಯ ನುಡಿಯುವವರ ಬಳಿಗೆ ಹೋಗಿ ಭವಿಷ್ಯದ ಬಗ್ಗೆ ಅವರೊಡನೆ ಕೇಳುವುದು ನಿಷೇಧಿಸಲಾಗಿದೆಯೆಂದು ಈ ಹದೀಸ್ ತಿಳಿಸುತ್ತದೆ.
  2. ಕೆಲವೊಮ್ಮೆ ಪಾಪ ಮಾಡುವುದರಿಂದ ಮನುಷ್ಯನಿಗೆ ಅವನ ಸತ್ಕರ್ಮದ ಪ್ರತಿಫಲವು ತಡೆಹಿಡಿಯಲ್ಪಡುತ್ತದೆ.
  3. ರಾಶಿಫಲ, ಹಸ್ತಸಾಮುದ್ರಿಕೆ, ಪಿಂಗಾಣಿ ಬರಹ ಮುಂತಾದವುಗಳನ್ನು ಕೇವಲ ಕುತೂಹಲಕ್ಕಾಗಿಯಾದರೂ ನೋಡುವುದು ಈ ಹದೀಸಿನಲ್ಲಿ ಒಳಪಡುತ್ತದೆ. ಏಕೆಂದರೆ ಇವೆಲ್ಲವೂ ಜ್ಯೋತಿಷ್ಯ ಮತ್ತು ಭವಿಷ್ಯ ಜ್ಞಾನದ ಭಾಗಗಳಾಗಿವೆ.
  4. ಭವಿಷ್ಯ ನುಡಿಯುವವನ ಬಳಿಗೆ ಹೋಗಿ ಅವನೊಡನೆ ಭವಿಷ್ಯವನ್ನು ಕೇಳುವವರಿಗೆ ಸಿಗುವ ಪ್ರತಿಫಲವು ಇದಾದರೆ ಭವಿಷ್ಯ ನುಡಿಯುವವನ ಪ್ರತಿಫಲ ಏನಾಗಿರಬಹುದು?
  5. ನಲ್ವತ್ತು ದಿನಗಳಲ್ಲಿ ನಿರ್ವಹಿಸಿದ ನಮಾಝ್ ಸಿಂಧುವಾಗುತ್ತದೆ ಮತ್ತು ಅದನ್ನು ಪುನಃ ನಿರ್ವಹಿಸಬೇಕಾಗಿಲ್ಲ. ಆದರೆ ಆ ನಮಾಝ್‌ಗಳಿಗೆ ಪ್ರತಿಫಲ ದೊರಕುವುದಿಲ್ಲ.

ವರ್ಗಗಳು

ಯಶಸ್ವಿಯಾಗಿ ರವಾನಿಸಲಾಗಿದೆ!