ಅಲ್ಲಾಹು ನಿಮ್ಮ ರೂಪಗಳನ್ನು ಅಥವಾ ನಿಮ್ಮ ಆಸ್ತಿಯನ್ನು ನೋಡುವುದಿಲ್ಲ. ಬದಲಿಗೆ, ಅವನು ನಿಮ್ಮ ಹೃದಯಗಳನ್ನು ಮತ್ತು ಕರ್ಮಗಳನ್ನು ನೋಡುತ್ತಾನೆ...

Scan the qr code to link to this page

ಹದೀಸ್
ವಿವರಣೆ
ಅನುವಾದಗಳನ್ನು ತೋರಿಸಿ
ಹದೀಸಿನ ಪ್ರಯೋಜನಗಳು
ವರ್ಗಗಳು
ಇನ್ನಷ್ಟು
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅಲ್ಲಾಹು ನಿಮ್ಮ ರೂಪಗಳನ್ನು ಅಥವಾ ನಿಮ್ಮ ಆಸ್ತಿಯನ್ನು ನೋಡುವುದಿಲ್ಲ. ಬದಲಿಗೆ, ಅವನು ನಿಮ್ಮ ಹೃದಯಗಳನ್ನು ಮತ್ತು ಕರ್ಮಗಳನ್ನು ನೋಡುತ್ತಾನೆ."
Sahih/Authentic. - Muslim

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಸರ್ವಶಕ್ತನಾದ ಅಲ್ಲಾಹು ತನ್ನ ದಾಸರ ರೂಪವನ್ನು ಅಥವಾ ದೇಹವನ್ನು, ಅದು ಸುಂದರವಾಗಿದೆಯೇ? ಅಸಹ್ಯವಾಗಿದೆಯೇ? ದೊಡ್ಡದೇ? ಸಣ್ಣದೇ? ಆರೋಗ್ಯದಲ್ಲಿದೆಯೇ? ಅನಾರೋಗ್ಯದಲ್ಲಿದೆಯೇ? ಎಂದು ನೋಡುವುದಿಲ್ಲ. ಅವರ ಆಸ್ತಿಯನ್ನು, ಅದು ಹೆಚ್ಚಿದೆಯೇ? ಅಥವಾ ಕಡಿಮೆಯಿದೆಯೇ? ಎಂದು ನೋಡುವುದಿಲ್ಲ. ಸರ್ವಶಕ್ತನಾದ ಅಲ್ಲಾಹು ಅವನ ದಾಸರನ್ನು ಇವುಗಳ ಆಧಾರದಲ್ಲಿ, ಅಂದರೆ ಅವು ಹೆಚ್ಚು ಇದೆಯೋ ಅಥವಾ ಕಡಿಮೆ ಇದೆಯೋ ಎಂಬ ಆಧಾರದಲ್ಲಿ ಶಿಕ್ಷಿಸುವುದಿಲ್ಲ ಮತ್ತು ವಿಚಾರಣೆ ಮಾಡುವುದಿಲ್ಲ. ಬದಲಿಗೆ ಅವನು ಅವರ ಹೃದಯಗಳನ್ನು, ಅದರಲ್ಲಿ ದೇವಭಯ, ದೃಢವಿಶ್ವಾಸ, ಪ್ರಾಮಾಣಿಕತೆ ಮತ್ತು ನಿಷ್ಕಳಂಕತೆಗಳಿವೆಯೋ, ಅಥವಾ ಅವುಗಳಲ್ಲಿರುವುದು ತೋರಿಕೆ ಮತ್ತು ಕೀರ್ತಿಯ ಆಸೆಯೋ ಎಂದು ನೋಡುತ್ತಾನೆ. ಅದೇ ರೀತಿ, ಅವರ ಕರ್ಮಗಳನ್ನು, ಅದು ಒಳ್ಳೆಯ ಕರ್ಮಗಳೋ ಅಥವಾ ಕೆಟ್ಟ ಕರ್ಮಗಳೋ ಎಂದು ನೋಡಿ ಅವುಗಳ ಆಧಾರದಲ್ಲೇ ಅವರಿಗೆ ಪ್ರತಿಫಲ ಮತ್ತು ಶಿಕ್ಷೆಯನ್ನು ನೀಡುತ್ತಾನೆ.

ಹದೀಸಿನ ಪ್ರಯೋಜನಗಳು

  1. ಹೃದಯವನ್ನು ಸರಿಪಡಿಸಲು ಮತ್ತು ಅದನ್ನು ಎಲ್ಲಾ ಕೆಟ್ಟ ಗುಣಗಳಿಂದ ಮುಕ್ತಗೊಳಿಸಲು ಕಾಳಜಿ ವಹಿಸಬೇಕೆಂದು ಈ ಹದೀಸ್ ತಿಳಿಸುತ್ತದೆ.
  2. ನಿಷ್ಕಳಂಕತೆಯು ಹೃದಯವನ್ನು ಸರಿಪಡಿಸುತ್ತದೆ, ಮತ್ತು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅನುಸರಣೆಯು ಕರ್ಮಗಳನ್ನು ಸರಿಪಡಿಸುತ್ತದೆ. ಸರ್ವಶಕ್ತನಾದ ಅಲ್ಲಾಹು ಇವೆರಡನ್ನೇ ನೋಡುತ್ತಾನೆ ಮತ್ತು ಪರಿಗಣಿಸುತ್ತಾನೆ.
  3. ತನ್ನ ಆಸ್ತಿ, ಸೌಂದರ್ಯ, ದೇಹ ಅಥವಾ ಐಹಿಕವಾದ ಯಾವುದೇ ವಸ್ತುವನ್ನು ಕಂಡು ಪುಳಕಿತನಾಗಿ ಮನುಷ್ಯನು ಮೋಸಹೋಗಬಾರದೆಂದು ಈ ಹದೀಸ್ ತಿಳಿಸುತ್ತದೆ.
  4. ಆಂತರ್ಯವನ್ನು ಸರಿಪಡಿಸದೆ ಕೇವಲ ಬಾಹ್ಯವನ್ನು ಮಾತ್ರ ಸರಿಪಡಿಸಲು ಪ್ರಾಮುಖ್ಯತೆ ನೀಡುವುದನ್ನು ಈ ಹದೀಸ್ ವಿರೋಧಿಸುತ್ತದೆ.

ವರ್ಗಗಳು

ಯಶಸ್ವಿಯಾಗಿ ರವಾನಿಸಲಾಗಿದೆ!