ಯಾರು ಕಷ್ಟದಲ್ಲಿರುವ ವ್ಯಕ್ತಿಗೆ ಕಾಲಾವಕಾಶ ನೀಡುತ್ತಾನೋ, ಅಥವಾ ಅವನ ಸಾಲವನ್ನು ಮನ್ನಾ ಮಾಡುತ್ತಾನೋ, ಅವನಿಗೆ ಪುನರುತ್ಥಾನ ದಿನದಂದು, ಅಂದರೆ ಅಲ್ಲಾಹನ ನೆರಳಿನ ಹೊರತು ಬೇರೆ ನೆರಳಿಲ್ಲದ ದಿನದಂದು, ಅಲ್ಲಾಹು ತನ್ನ ಸಿಂಹಾಸನದ ನೆರಳಿನಲ್ಲಿ ನೆರಳು ನೀಡುತ್ತಾನೆ...

Scan the qr code to link to this page

ಹದೀಸ್
ವಿವರಣೆ
ಅನುವಾದಗಳನ್ನು ತೋರಿಸಿ
ಹದೀಸಿನ ಪ್ರಯೋಜನಗಳು
ವರ್ಗಗಳು
ಇನ್ನಷ್ಟು
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರು ಕಷ್ಟದಲ್ಲಿರುವ ವ್ಯಕ್ತಿಗೆ ಕಾಲಾವಕಾಶ ನೀಡುತ್ತಾನೋ, ಅಥವಾ ಅವನ ಸಾಲವನ್ನು ಮನ್ನಾ ಮಾಡುತ್ತಾನೋ, ಅವನಿಗೆ ಪುನರುತ್ಥಾನ ದಿನದಂದು, ಅಂದರೆ ಅಲ್ಲಾಹನ ನೆರಳಿನ ಹೊರತು ಬೇರೆ ನೆರಳಿಲ್ಲದ ದಿನದಂದು, ಅಲ್ಲಾಹು ತನ್ನ ಸಿಂಹಾಸನದ ನೆರಳಿನಲ್ಲಿ ನೆರಳು ನೀಡುತ್ತಾನೆ."
Sahih/Authentic. - At-Tirmidhi

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಯಾರು ಸಾಲಗಾರನಿಗೆ ಸಾಲ ಮರುಪಾವತಿ ಮಾಡಲು ಕಾಲಾವಕಾಶ ನೀಡುತ್ತಾನೋ, ಅಥವಾ ಅವನ ಸಾಲವನ್ನು ಮನ್ನಾ ಮಾಡುತ್ತಾನೋ, ಅವನಿಗೆ ಸಿಗುವ ಪ್ರತಿಫಲವು: ಪುನರುತ್ಥಾನ ದಿನದಂದು ಅಲ್ಲಾಹು ಅವನಿಗೆ ತನ್ನ ಸಿಂಹಾಸನದ ನೆರಳಿನಲ್ಲಿ ನೆರಳು ನೀಡುತ್ತಾನೆ. ಅಂದು ಸೂರ್ಯನು ಜನರ ತಲೆಯ ಹತ್ತಿರದಲ್ಲಿದ್ದು ಅದರ ಶಾಖವು ಬಹಳ ಕಠೋರವಾಗಿರುತ್ತದೆ. ಅಂದು ಅಲ್ಲಾಹು ನೀಡಿದ ನೆರಳಿನ ಹೊರತು ಬೇರೆ ಯಾವುದೇ ನೆರಳೂ ಇರುವುದಿಲ್ಲ.

ಹದೀಸಿನ ಪ್ರಯೋಜನಗಳು

  1. ಜನರಿಗೆ ವಿಷಯಗಳನ್ನು ಸುಲಭಗೊಳಿಸುವುದರ ಶ್ರೇಷ್ಠತೆಯನ್ನು ಮತ್ತು ಅದು ಪುನರುತ್ಥಾನ ದಿನದ ಭಯಾನಕತೆಗಳಿಂದ ಪಾರಾಗುವ ಒಂದು ಮಾರ್ಗವೆಂದು ಈ ಹದೀಸ್ ತಿಳಿಸುತ್ತದೆ.
  2. ಪ್ರತಿಫಲವು ಕರ್ಮದ ಅದೇ ವರ್ಗಕ್ಕೆ ಸೇರಿರುತ್ತದೆ.

ವರ್ಗಗಳು

ಯಶಸ್ವಿಯಾಗಿ ರವಾನಿಸಲಾಗಿದೆ!