“ತೀವ್ರವಾದಿಗಳು ನಾಶವಾದರು

Scan the qr code to link to this page

ಹದೀಸ್
ವಿವರಣೆ
ಅನುವಾದಗಳನ್ನು ತೋರಿಸಿ
ಹದೀಸಿನ ಪ್ರಯೋಜನಗಳು
ವರ್ಗಗಳು
ಇನ್ನಷ್ಟು
ಅಬ್ದುಲ್ಲಾ ಬಿನ್ ಮಸ್‍ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ತೀವ್ರವಾದಿಗಳು ನಾಶವಾದರು.” ಅವರು ಇದನ್ನು ಮೂರು ಸಲ ಹೇಳಿದರು.
Sahih/Authentic. - Muslim

ವಿವರಣೆ

ಧಾರ್ಮಿಕ ಮತ್ತು ಲೌಕಿಕ ವಿಷಯಗಳಲ್ಲಿ ಹಾಗೂ ಮಾತು ಮತ್ತು ಕೆಲಸಗಳಲ್ಲಿ, ಯಾವುದೇ ಮಾರ್ಗದರ್ಶನ ಅಥವಾ ಜ್ಞಾನವಿಲ್ಲದೆ ಅತಿರೇಕಕ್ಕೆ ಹೋಗುವವರು ಮತ್ತು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಕಲಿಸಿದ ಧಾರ್ಮಿಕ ಎಲ್ಲೆಯನ್ನು ಮೀರುವವರಿಗೆ ಉಂಟಾಗುವ ನಾಶ-ನಷ್ಟಗಳ ಬಗ್ಗೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ರವರು ತಿಳಿಸುತ್ತಿದ್ದಾರೆ

ಹದೀಸಿನ ಪ್ರಯೋಜನಗಳು

  1. ಎಲ್ಲಾ ವಿಷಯಗಳಲ್ಲೂ ಹದ್ದುಮೀರುವುದನ್ನು ಮತ್ತು ಶಕ್ತಿಮೀರಿ ಹೊರೆ ಹೊರುವುದನ್ನು ನಿಷೇಧಿಸಲಾಗಿದೆ, ಎಲ್ಲಾ ವಿಷಯಗಳಲ್ಲೂ—ವಿಶೇಷವಾಗಿ ಆರಾಧನೆಯ ವಿಷಯದಲ್ಲಿ ಮತ್ತು ಸಜ್ಜನರನ್ನು ಗೌರವಿಸುವ ವಿಷಯದಲ್ಲಿ—ಇವುಗಳನ್ನು ತೊರೆಯಬೇಕೆಂದು ಈ ಹದೀಸ್ ತಿಳಿಸುತ್ತದೆ.
  2. ಆರಾಧನಾ ವಿಷಯಗಳಲ್ಲಿ ಪರಿಪೂರ್ಣತೆಯನ್ನು ಪಡೆಯಲು ಬಯಸುವುದು ಉತ್ತಮ ಕಾರ್ಯವಾಗಿದ್ದರೂ, ಅದು ಧರ್ಮಸಂಹಿತೆಗೆ ಅನುಗುಣವಾಗಿರಬೇಕೆಂದು ಈ ಹದೀಸ್ ತಿಳಿಸುತ್ತದೆ.
  3. ಪ್ರಮುಖ ವಿಷಯಗಳನ್ನು ಒತ್ತಿ ಹೇಳುವುದು ಅಪೇಕ್ಷಣೀಯವೆಂದು ಈ ಹದೀಸ್ ತಿಳಿಸುತ್ತದೆ. ಏಕೆಂದರೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಈ ವಾಕ್ಯವನ್ನು ಮೂರು ಸಲ ಪುನರಾವರ್ತಿಸಿದರು.
  4. ಇಸ್ಲಾಂ ಧರ್ಮದ ಸಹಿಷ್ಣುತೆ ಮತ್ತು ಸರಳತೆಯನ್ನು ಈ ಹದೀಸ್ ತಿಳಿಸುತ್ತದೆ.

ವರ್ಗಗಳು

ಯಶಸ್ವಿಯಾಗಿ ರವಾನಿಸಲಾಗಿದೆ!