“ಕ್ರೈಸ್ತರು ಮರ್ಯಮರ ಮಗನನ್ನು ಮಿತಿಮೀರಿ ಪ್ರಶಂಸಿಸಿದಂತೆ ನೀವು ನನ್ನನ್ನು ಮಿತಿಮೀರಿ ಪ್ರಶಂಸಿಸಬೇಡಿ. ಏಕೆಂದರೆ ನಾನು ಅಲ್ಲಾಹನ ಒಬ್ಬ ದಾಸ ಮಾತ್ರ. ಆದ್ದರಿಂದ ನೀವು ಅಲ್ಲಾಹನ ದಾಸ ಮತ್ತು ಸಂದೇಶವಾಹಕ ಎಂದು ಹೇಳಿರಿ.”...

Scan the qr code to link to this page

ಹದೀಸ್
ವಿವರಣೆ
ಅನುವಾದಗಳನ್ನು ತೋರಿಸಿ
ಹದೀಸಿನ ಪ್ರಯೋಜನಗಳು
ವರ್ಗಗಳು
ಇನ್ನಷ್ಟು
ಉಮರ್ ಬಿನ್ ಖತ್ತಾಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: “ಕ್ರೈಸ್ತರು ಮರ್ಯಮರ ಮಗನನ್ನು ಮಿತಿಮೀರಿ ಪ್ರಶಂಸಿಸಿದಂತೆ ನೀವು ನನ್ನನ್ನು ಮಿತಿಮೀರಿ ಪ್ರಶಂಸಿಸಬೇಡಿ. ಏಕೆಂದರೆ ನಾನು ಅಲ್ಲಾಹನ ಒಬ್ಬ ದಾಸ ಮಾತ್ರ. ಆದ್ದರಿಂದ ನೀವು ಅಲ್ಲಾಹನ ದಾಸ ಮತ್ತು ಸಂದೇಶವಾಹಕ ಎಂದು ಹೇಳಿರಿ.”
Sahih/Authentic. - Al-Bukhari

ವಿವರಣೆ

ತನ್ನನ್ನು ಪ್ರಶಂಸಿಸುವಾಗ ಮಿತಿಮೀರುವುದು ಮತ್ತು ಧರ್ಮವು ವಿಧಿಸಿದ ಎಲ್ಲೆಯನ್ನು ಮೀರುವುದು, ಅಲ್ಲಾಹನಿಗೆ ಮಾತ್ರ ಸೀಮಿತವಾಗಿರುವ ಗುಣಲಕ್ಷಣಗಳನ್ನು ಅಥವಾ ಅವನು ಮಾತ್ರ ಮಾಡುವ ಕ್ರಿಯೆಗಳನ್ನು ತನಗೆ ಸೇರಿಸಿ ಹೇಳುವುದು, ತನಗೆ ಆಗೋಚರ ಜ್ಞಾನವಿದೆಯೆಂದು ಹೇಳುವುದು, ಅಥವಾ ಅಲ್ಲಾಹನೊಂದಿಗೆ ತನ್ನನ್ನು ಕೂಡ ಕರೆದು ಪ್ರಾರ್ಥಿಸುವುದು ಮುಂತಾದ ಕ್ರಿಶ್ಚಿಯನ್ನರು ಈಸಾ ಬಿನ್ ಮರ್ಯಮ್ (ಅವರ ಮೇಲೆ ಶಾಂತಿಯಿರಲಿ) ರೊಡನೆ ಮಾಡಿದ್ದನ್ನು ತನ್ನೊಡನೆ ಮಾಡುವುದನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿರೋಧಿಸುತ್ತಿದ್ದಾರೆ ನಂತರ, ತಾನು ಅಲ್ಲಾಹನ ಒಬ್ಬ ದಾಸ ಮಾತ್ರ ಎಂದು ಅವರು ವಿವರಿಸುತ್ತಾರೆ. ಅವರನ್ನು ಅಲ್ಲಾಹನ ದಾಸ ಮತ್ತು ಸಂದೇಶವಾಹಕ ಎಂದು ಕರೆಯಬೇಕೆಂದು ಆದೇಶಿಸುತ್ತಾರೆ.

ಹದೀಸಿನ ಪ್ರಯೋಜನಗಳು

  1. ಪ್ರಶಂಸೆ ಅಥವಾ ಮುಖಸ್ತುತಿ ಮಾಡುವಾಗ ಧಾರ್ಮಿಕ ಎಲ್ಲೆ ಮೀರಬಾರದೆಂದು ಇಲ್ಲಿ ಎಚ್ಚರಿಸಲಾಗಿದೆ. ಏಕೆಂದರೆ ಅದು ಬಹುದೇವಾರಾಧನೆಗೆ ಕಾರಣವಾಗುವ ಸಾಧ್ಯತೆಯಿದೆ.
  2. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎಚ್ಚರಿಸಿದ ಸಂಗತಿಯು ಇಂದು ಈ ಸಮುದಾಯದಲ್ಲಿ ಕಂಡುಬರುತ್ತಿದೆ. ಕೆಲವರು ಪ್ರವಾದಿ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರವರ ವಿಷಯದಲ್ಲಿ ಎಲ್ಲೆ ಮೀರಿದರೆ, ಕೆಲವರು ಅವರ ಕುಟುಂಬದವರ ವಿಷಯದಲ್ಲಿ ಎಲ್ಲೆ ಮೀರಿದರು. ಇನ್ನು ಕೆಲವರು ಮಹಾಪುರುಷರ ವಿಷಯದಲ್ಲಿ ಎಲ್ಲೆ ಮೀರಿದರು. ಇವರೆಲ್ಲರೂ ಬಹುದೇವಾರಾಧನೆಯ ವಲಯದಲ್ಲಿ ಸೇರಿಕೊಂಡರು.
  3. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮನ್ನು ಅಲ್ಲಾಹನ ದಾಸ ಎಂದು ಹೇಳಿದರು. ಅಂದರೆ, ಅವರು ಅಲ್ಲಾಹನ ಪೋಷಣೆ ಮತ್ತು ನಿಯಂತ್ರಣದಲ್ಲಿರುವ ಅವನ ದಾಸನಾಗಿದ್ದು, ಅಲ್ಲಾಹನ ಪ್ರಭುತ್ವದಲ್ಲಿ ಸೇರಿದ ಯಾವುದನ್ನೂ ಅವರಿಗೆ ಸೇರಿಸಿ ಹೇಳಬಾರದೆಂದು ವಿವರಿಸುವುದಕ್ಕಾಗಿ ಅವರು ಹೀಗೆ ಹೇಳಿದರು.
  4. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮನ್ನು ಅಲ್ಲಾಹನ ಸಂದೇಶವಾಹಕ ಎಂದು ಹೇಳಿದರು. ಅವರು ಅಲ್ಲಾಹನ ಕಡೆಯಿಂದ ಕಳುಹಿಸಲಾದ ಅವನ ಸಂದೇಶವಾಹಕರಾಗಿದ್ದು, ಅವರ ಮಾತನ್ನು ನಂಬುವುದು ಮತ್ತು ಅವರನ್ನು ಅನುಸರಿಸುವುದು ಕಡ್ಡಾಯವೆಂದು ತಿಳಿಸುವುದಕ್ಕಾಗಿ ಅವರು ಹೀಗೆ ಹೇಳಿದರು.

ವರ್ಗಗಳು

ಯಶಸ್ವಿಯಾಗಿ ರವಾನಿಸಲಾಗಿದೆ!