ಓ ಅಬೂ ಮುಂದಿರ್! ನಿಮ್ಮ ಕೈಯಲ್ಲಿರುವ ಅಲ್ಲಾಹನ ಗ್ರಂಥದಲ್ಲಿ ಅತಿ ಶ್ರೇಷ್ಠವಾದ ವಚನ ಯಾವುದೆಂದು ನಿಮಗೆ ತಿಳಿದಿದೆಯೇ?" ನಾನು ಹೇಳಿದೆ: "ಅಲ್ಲಾಹು ಲಾ ಇಲಾಹ ಇಲ್ಲಾ ಹುವಲ್ ಹಯ್ಯುಲ್ ಕಯ್ಯೂಮ್ (ಆಯತುಲ್ ಕುರ್ಸಿ) [ಬಕರ: 255]". ಆಗ ಅವರು ನನ್ನ ಎದೆಗೆ ತಟ್ಟುತ್ತಾ ಹೇಳಿದರು: "ಅಲ್ಲಾಹನಾಣೆ! ಓ ಅ...

Scan the qr code to link to this page

ಹದೀಸ್
ವಿವರಣೆ
ಅನುವಾದಗಳನ್ನು ತೋರಿಸಿ
ಹದೀಸಿನ ಪ್ರಯೋಜನಗಳು
ವರ್ಗಗಳು
ಇನ್ನಷ್ಟು
ಉಬೈ ಬಿನ್ ಕಅಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದರು: "ಓ ಅಬೂ ಮುಂದಿರ್! ನಿಮ್ಮ ಕೈಯಲ್ಲಿರುವ ಅಲ್ಲಾಹನ ಗ್ರಂಥದಲ್ಲಿ ಅತಿ ಶ್ರೇಷ್ಠವಾದ ವಚನ ಯಾವುದೆಂದು ನಿಮಗೆ ತಿಳಿದಿದೆಯೇ?" ನಾನು ಹೇಳಿದೆ: "ಅಲ್ಲಾಹು ಮತ್ತು ಅವನ ಸಂದೇಶವಾಹಕರೇ ಹೆಚ್ಚು ತಿಳಿದವರು." ಅವರು ಕೇಳಿದರು: "ಓ ಅಬೂ ಮುಂದಿರ್! ನಿಮ್ಮ ಕೈಯಲ್ಲಿರುವ ಅಲ್ಲಾಹನ ಗ್ರಂಥದಲ್ಲಿ ಅತಿ ಶ್ರೇಷ್ಠವಾದ ವಚನ ಯಾವುದೆಂದು ನಿಮಗೆ ತಿಳಿದಿದೆಯೇ?" ನಾನು ಹೇಳಿದೆ: "ಅಲ್ಲಾಹು ಲಾ ಇಲಾಹ ಇಲ್ಲಾ ಹುವಲ್ ಹಯ್ಯುಲ್ ಕಯ್ಯೂಮ್ (ಆಯತುಲ್ ಕುರ್ಸಿ) [ಬಕರ: 255]". ಆಗ ಅವರು ನನ್ನ ಎದೆಗೆ ತಟ್ಟುತ್ತಾ ಹೇಳಿದರು: "ಅಲ್ಲಾಹನಾಣೆ! ಓ ಅಬೂ ಮುಂದಿರ್, ಜ್ಞಾನವು ನಿಮಗೆ ಸಂತೋಷವನ್ನು ದಯಪಾಲಿಸಲಿ."
Sahih/Authentic. - Muslim

ವಿವರಣೆ

ಅಲ್ಲಾಹನ ಗ್ರಂಥದಲ್ಲಿರುವ ಅತಿ ಶ್ರೇಷ್ಠ ವಚನದ ಬಗ್ಗೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉಬೈ ಬಿನ್ ಕಅಬ್‌ರೊಡನೆ ಕೇಳಿದರು. ಆದರೆ ಅವರು ಉತ್ತರ ಹೇಳಲು ಹಿಂಜರಿದರು. ನಂತರ ಅವರು ಅದು ಆಯತುಲ್ ಕುರ್ಸಿ “ಅಲ್ಲಾಹು ಲಾ ಇಲಾಹ ಇಲ್ಲಾ ಹುವಲ್ ಹಯ್ಯುಲ್ ಕಯ್ಯೂಮ್” ಎಂದು ಹೇಳಿದರು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅದನ್ನು ಒಪ್ಪಿಕೊಂಡು, ಅವರ ಎದೆಯು ಜ್ಞಾನ ಮತ್ತು ಯುಕ್ತಿಯಿಂದ ತುಂಬಿದೆಯೆಂದು ಸೂಚಿಸಲು ಅದನ್ನು ತಟ್ಟಿದರು. ನಂತರ ಆ ಜ್ಞಾನವು ಅವರಿಗೆ ಸಂತೋಷವನ್ನು ನೀಡಲಿ ಮತ್ತು ಜ್ಞಾನ ಸಂಪಾದನೆಯ ಮಾರ್ಗವು ಅವರಿಗೆ ಸುಲಭವಾಗಲಿ ಎಂದು ಪ್ರಾರ್ಥಿಸಿದರು.

ಹದೀಸಿನ ಪ್ರಯೋಜನಗಳು

  1. ಉಬೈ ಬಿನ್ ಕಅಬ್‌ರ (ಅಲ್ಲಾಹು ಅವರಿಂದ ಸಂತೃಪ್ತನಾಗಲಿ) ಮಹಾ ಶ್ರೇಷ್ಠತೆಯನ್ನು ಈ ಹದೀಸ್ ವಿವರಿಸುತ್ತದೆ.
  2. ಆಯತುಲ್ ಕುರ್ಸಿ ಪವಿತ್ರ ಕುರ್‌ಆನಿನ ಅತಿ ಶ್ರೇಷ್ಠ ವಚನವಾಗಿದೆ. ಅದನ್ನು ಕಂಠಪಾಠ ಮಾಡುವುದು, ಅದರ ಅರ್ಥಗಳನ್ನು ಕಲಿಯುವುದು ಮತ್ತು ಅದರ ಪ್ರಕಾರ ಜೀವನ ನಡೆಸುವುದು ಅತ್ಯಗತ್ಯವಾಗಿದೆ.

ವರ್ಗಗಳು

ಯಶಸ್ವಿಯಾಗಿ ರವಾನಿಸಲಾಗಿದೆ!